MOODUBIDIRE
Bidire News

2026-10-30

2026-10-30

2026-10-15

ನಾಪತ್ತೆ ಪ್ರಕರಣಕ್ಕೆ ತಿರುವು; ಲಕ್ನೋದಲ್ಲಿ ಪತ್ತೆಯಾದ ಪಡುಮಾರ್ನಾಡು ಯುವತಿ

ಮೂಡುಬಿದಿರೆ: ಫ್ರೀ ಫೈರ್ ಆಟದ ಮೂಲಕ ಪರಿಚಯವಾದ ಉತ್ತರಪ್ರದೇಶದ ಯುವಕನನ್ನು ಪ್ರೀತಿಸಿದ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆಯ ರಮ್ಯಾ, ಆತನನ್ನು ಭೇಟಿಯಾಗಲು ಲಕ್ನೋಗೆ ತೆರಳಿದ್ದು, ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.

ಎಸ್ಸೆಸ್ಸೆಲ್ಸಿವರೆಗೆ ಓದಿರುವ ರಮ್ಯಾ, ಲಕ್ನೋದ ಅಮನ್ ವರ್ಮನೊಂದಿಗೆ ಕಳೆದೊಂದು ವರ್ಷದಿಂದ ಆನ್‌ಲೈನ್‌ನಲ್ಲಿ ಸ್ನೇಹ ಬೆಳೆಸಿಕೊಂಡಿದ್ದರು. ಈ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಆಗಸ್ಟ್ 29ರಂದು ರಮ್ಯಾ ನಾಪತ್ತೆಯಾಗಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ನಡೆಸಿದ ಪೊಲೀಸರು ರಮ್ಯಾ ಲಕ್ನೋದಲ್ಲಿರುವುದನ್ನು ಪತ್ತೆಹಚ್ಚಿದ್ದಾರೆ. ತಾನು ಪ್ರಾಯಪ್ರಬುದ್ಧಳಾಗಿದ್ದು, ಸ್ವಇಚ್ಛೆಯಿಂದ ಲಕ್ನೋಗೆ ಬಂದಿದ್ದೇನೆ ಹಾಗೂ ಅಮನ್ ವರ್ಮನನ್ನು ಮದುವೆಯಾಗಲು ನಿರ್ಧರಿಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ ಎಂದು ತಿಳಿದುಬಂದಿದೆ.