MOODUBIDIRE
Bidire News

2026-10-30

2026-10-30

2026-10-15

ಮೂಡುಬಿದಿರೆ: ಭೀಕರ ಅಪಘಾತ: ಅಂಬ್ಯುಲೆನ್ಸ್-ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು- ಬನ್ನಡ್ಕ ಅಪಘಾತ ವಲಯದಲ್ಲಿ ಮತ್ತೊಂದು ದುರ್ಘಟನೆ

ಮೂಡುಬಿದಿರೆ: ಭೀಕರ ಅಪಘಾತ: ಅಂಬ್ಯುಲೆನ್ಸ್-ಆಟೋ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು- ಬನ್ನಡ್ಕ ಅಪಘಾತ ವಲಯದಲ್ಲಿ ಮತ್ತೊಂದು ದುರ್ಘಟನೆ

ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕ ಎಂಬಲ್ಲಿ ಅಂಬ್ಯುಲೆನ್ಸ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆಟೋ ಚಾಲಕ ಜಾನ್ ಕೊರೆಯಾ ಸ್ಥಳದಲ್ಲೇ ಮೃತೊಟ್ಟಿದ್ದಾರೆ..

ಬನ್ನಡ್ಕ ಮಠದಲ್ಲಿ ನಡೆಯುತ್ತಿದ್ದ ಸಮಾರಂಭವೊಂದಕ್ಕೆ ಪ್ರಯಾಣಿಕರನ್ನು ಬಿಟ್ಟು ಆಟೋ ರಿಕ್ಷಾವನ್ನು ಹಿಂದಕ್ಕೆ (ರಿವರ್ಸ್) ತೆಗೆಯುತ್ತಿದ್ದ ಸಂದರ್ಭದಲ್ಲಿ, ಮೂಡುಬಿದಿರೆ ಕಡೆಯಿಂದ ಕಾರ್ಕಳಕ್ಕೆ ಅತೀ ವೇಗವಾಗಿ ತೆರಳುತ್ತಿದ್ದ ಅಂಬ್ಯುಲೆನ್ಸ್ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಆಟೋ ರಿಕ್ಷಾದ ಮೇಲ್ಬಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಅಂಬ್ಯುಲೆನ್ಸ್‌ನ ಮುಂಭಾಗ ಕೂಡ ಜಖಂಗೊಂಡಿದೆ. ಸದಾ ಅಪಘಾತಗಳು ಸಂಭವಿಸುವ ಬನ್ನಡ್ಕ ವಲಯದಲ್ಲಿ ಈ ದುರ್ಘಟನೆ ನಡೆದಿದೆ.