MOODUBIDIRE
Bidire News

2026-10-30

2026-10-30

2026-10-15

ಕೋಟೆಬಾಗಿಲಿನಲ್ಲಿ ಸ್ಕೂಟರ್ ಅಪಘಾತ: ಗಾಯಗೊಂಡಿದ್ದ ಯುವಕ ಪ್ರಶ್ವಿತ್ ಹೆಗ್ಡೆ ಮೃತ್ಯು

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಬುಧವಾರ ಸಾಯಂಕಾಲ ಸ್ಕೂಟಿಯೊಂದು ಸ್ಕಿಡ್ ಆಗಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿದ್ದ ಇಬ್ಬರ ಪೈಕಿ ಪ್ರಶ್ವಿತ್ ಹೆಗ್ಡೆ(17) ಮೃತಪಟ್ಟಿದ್ದಾರೆ.

ಕೋಟೆಬಾಗಿಲಿನ ಸುಧಾಕರ್ ಅವರ ಪುತ್ರನಾಗಿರುವ ಪ್ರಶ್ವಿತ್ ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ. ಘಟನೆಯಲ್ಲಿ ಯುವಕ ದೀಕ್ಷಿತ್ ಗಾಯಗೊಂಡಿದ್ದಾರೆ.