ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗ ಹಾಗೂ ಪ್ರಜ್ಞಾಜಿಜ್ಞಾಸಾವೇದಿಹಿ ವೇದಿಕೆಯ ಸಹಯೋಗದಲ್ಲಿ ಮಹಾಭಾರತ ಕಾರ್ಯಾಗಾರ ಹಾಗೂ ರಾಮಾಯಣ-ಮಹಾಭಾರತ ಪರೀಕ್ಷೆಗಳ ಪ್ರಮಾಣಪತ್ರ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಯಿತು.
ಆಳ್ವಾಸ್ ಪ್ರೌಢಶಾಲೆಯ ಒಟ್ಟು 143 ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ ನಡೆಸಿದ್ದು, ಶೇ.100 ಫಲಿತಾಂಶ ದಾಖಲಾಯಿತು.
ಆಳ್ವಾಸ್ ಶಾಲೆಯ ಆಡಳಿತಾಧಿಕಾರಿ ಪ್ರೀತಂ ಕುಂದರ್ ದೀಪ ಪ್ರಜ್ವಲನೆ ನೆರವೇರಿಸಿದರು.
ಸಂಶೋಧಕ ಪ್ರೊ. ಗೋಪಾಲಕೃಷ್ಣ ನಾರಾಯಣ ಭಟ್ ಮಾತನಾಡಿ, ಮಹಾಭಾರತವು ಕೇವಲ ಪೌರಾಣಿಕ ಕಾವ್ಯವಲ್ಲ, ಅದು ಮಾನವ ಜೀವನದ ಮಾರ್ಗದರ್ಶಕ ಗ್ರಂಥವಾಗಿದ್ದು, ಆತ್ಮಜ್ಞಾನ, ಧರ್ಮಾಚರಣೆ ಮತ್ತು ಸೌಹಾರ್ದಯುತ ಸಹಜೀವನದ ಪಾಠಗಳನ್ನು ನೀಡುತ್ತದೆ. ರಾಮಾಯಣ ಮತ್ತು ಮಹಾಭಾರತದಂತಹ ಪವಿತ್ರ ಗ್ರಂಥಗಳು ಮಾನವೀಯ ಮೌಲ್ಯಗಳನ್ನು ಬೆಳೆಸುವ ಜೀವಂತ ಪಾಠಶಾಲೆಗಳು ಎಂದರು.
ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ವಿನಾಯಕ ಭಟ್ ಗಾಳಿಮನೆ ಹಾಗೂ ಪ್ರೌಢಶಾಲೆ ಮತ್ತು ಪದವಿ ವಿಭಾಗದ ಬೋಧಕ ಸಿಬ್ಬಂದಿಗಳು ಇದ್ದರು.
ಶ್ರಾವ್ಯ ಹಾಗೂ ಸ್ಪರ್ಷಾ ಕಾರ್ಯಕ್ರಮ ನಿರೂಪಿಸಿ, ಆಶ್ವಿಜಾ ವಂದಿಸಿ, ವಂಶಿಕಾ ಮತ್ತು ಸ್ವಾಗತಿಸಿದರು.

