MOODUBIDIRE
Bidire News

2026-10-30

2026-10-30

2026-10-15

ಬೆದ್ರ ಜೈನಪೇಟೆಯಿಂದ ಜ್ಯೋತಿನಗರದವರೆಗಿನ ರಸ್ತೆ ಗುಂಡಿಗಳನ್ನು ಮುಚ್ಚಿದ ದೊಡ್ಡಮನೆ ಆಟೋರಿಕ್ಷಾ ಚಾಲಕ, ಮಾಲಕರು, ಸಮಾನ ಮನಸ್ಕರು

ಮೂಡುಬಿದಿರೆ: ಜೈನಪೇಟೆಯಿಂದ ಜ್ಯೋತಿನಗರದವರೆಗಿನ ಮುಖ್ಯ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚುವ ಮೂಲಕ ದೊಡ್ಡಮನೆ ಆಟೋರಿಕ್ಷಾ ಚಾಲಕರು, ಮಾಲಕರು ಹಾಗೂ ಸಮಾನ ಮನಸ್ಕರು ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ರಸ್ತೆಯಲ್ಲಿದ್ದ ಗುಂಡಿಗಳಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ತಂಡದ ಸದಸ್ಯರು ಸ್ವಯಂಪ್ರೇರಿತವಾಗಿ ಗುಂಡಿಗಳನ್ನು ಮುಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಸಮಾಜದ ಸಮಸ್ಯೆಗಳಿಗೆ ಕೇವಲ ದೂರು ನೀಡುವುದಷ್ಟೇ ಅಲ್ಲದೆ, ಸಾಧ್ಯವಾದಷ್ಟು ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಶಂಕರ್ ಸುವರ್ಣ, ಸುಕೇಶ್, ಸೋಮಶೇಖರ್, ಕ್ಲಾರಿಯೋ ಡಿಸೋಜ ಹಾಗೂ ಸುಮಿತ್ ಕೈಜೋಡಿಸಿದರು.

ಸಮಾಜದ ಹಿತವೇ ಆದ್ಯತೆ ಎಂಬ ಸಂದೇಶ ಸಾರಿದ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.