MOODUBIDIRE
Bidire News

ಧವಲಾ ಕಾಲೇಜಿನ ಎನ್‌ಎಸ್‌ಎಸ್ ಶಿಬಿರ ಸಮಾರೋಪ: ಸರ್ಕಾರಿ ಶಾಲೆಗಳ ಉಳಿವಿಗೆ ಎನ್‌ಎಸ್‌ಎಸ್ ಕಾರ್ಯಕ್ರಮ ಅಗತ್ಯ- ಶಾಸಕ ವಿ. ಸುನಿಲ್ ಕುಮಾರ್

ಮೂಡುಬಿದಿರೆ: ಶ್ರೀ ಧವಲಾ ಕಾಲೇಜು, ಮೂಡುಬಿದಿರೆ ನೇತೃತ್ವದಲ್ಲಿ ಕೆರ್ವಾಶೆ ಮೈನ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ನಶಾ ಮುಕ್ತ ಯುವ ಫಾರ್ ವಿಕಸಿತ ಭಾರತ’ ಎಂಬ ಶಿರೋನಾಮೆಯಲ್ಲಿ ಅಕ್ಟೋಬರ್ 4ರಿಂದ 10ರವರೆಗೆ ನಡೆದ ವಾರ್ಷಿಕ ವಿಶೇಷ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಶಿಬಿರವು l ಸಮಾರೋಪಗೊಂಡಿತು. 
ಅಧ್ಯಕ್ಷತೆ ವಹಿಸಿದ್ದ ಶ್ರೀ ಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಾರ್ಶ್ವನಾಥ ಅಜ್ರಿ, ಎನ್‌ಎಸ್‌ಎಸ್‌ನಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದೊರೆಯುವ ಅವಕಾಶಗಳ ಕುರಿತು ಮಾತನಾಡಿದರು.

ಶ್ರೀ ಡಿ.ಜೆ.ವಿ. ಸಂಘದ ಸಂಚಾಲಕ ಕೆ. ಹೇಮರಾಜ್ ಸಮಾರೋಪ ಭಾಷಣ ಮಾಡಿ, ವಿದ್ಯಾರ್ಥಿಗಳ ಸೇವೆಯನ್ನು ಶ್ಲಾಘಿಸಿದರು. ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಲು ಎನ್‌ಎಸ್‌ಎಸ್‌ನಂತಹ ಕಾರ್ಯಕ್ರಮಗಳು ಅಗತ್ಯವೆಂದು ತಿಳಿಸಿ, ಶಿಬಿರಾರ್ಥಿಗಳನ್ನು ಅಭಿನಂದಿಸಿದರು.

ಮುಖ್ಯ ಅತಿಥಿಯಾಗಿದ್ದ ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಗೆ ಮಾಳ, ವಿದ್ಯಾರ್ಥಿಗಳು ಸೇವಾ ಮನೋಭಾವವನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಕೆರ್ವಾಶೆಯ ಪುರೋಹಿತ ಸುಬ್ರಾಯ ಭಟ್ ಮಾತನಾಡಿ, ಶಾಲೆಯೆಂಬ ರಥವನ್ನು ಮುನ್ನಡೆಸಲು ಮುಂದಿನ ದಿನಗಳಲ್ಲಿ ಸಂಘ-ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದರು.

ಕೆರ್ವಾಶೆ ಮೈನ್ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಜೇಂದ್ರ ಜೈನ್, ಎನ್‌ಎಸ್‌ಎಸ್ ಶಿಬಿರವನ್ನು ಆಯೋಜಿಸಿದ ಶ್ರೀ ಧವಲಾ ಕಾಲೇಜಿನ ಆಡಳಿತ ಮಂಡಳಿಗೆ ಧನ್ಯವಾದ ಸಲ್ಲಿಸಿದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಹರಿದಾಸ್ ಹೆಗ್ಡೆ ಮತ್ತು ಕೃಷ್ಣನಾಯಕ್ ಹಿಂದಿನ ಶಾಲಾ ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಗುಲಾಬಿ ಮಾತನಾಡಿ, ಶಿಬಿರಾರ್ಥಿಗಳು ನಡೆಸಿದ ಸ್ವಚ್ಛತಾ ಕಾರ್ಯಗಳು ಹಾಗೂ ಜಾಗೃತಿ ಕಾರ್ಯಕ್ರಮಗಳು ಗ್ರಾಮದ ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಸ್ಫೂರ್ತಿ ನೀಡಿವೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪುರೋಹಿತ ಬಾಲಕೃಷ್ಣ ಭಟ್, ಉಪಾಧ್ಯಕ್ಷೆ ಸಂಗೀತ ಆಚಾರ್ಯ ಹಾಗೂ ದಾನಿ ನಮಿರಾಜ್ ಜೈನ್ ಉಪಸ್ಥಿತರಿದ್ದರು. ಶ್ರೀ ಧವಲಾ ಕಾಲೇಜಿನ ವತಿಯಿಂದ ಅತಿಥಿಗಳಿಗೆ ಹಾಗೂ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಮಹನೀಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಾಲೆಯ ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರು ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.

ಶಿಬಿರದ ಸಂಯೋಜನಾಧಿಕಾರಿಗಳಾದ ಮಲ್ಲಿಕಾ ಮತ್ತು ಯಶೋಧ ಮೇಡಂ ಅವರನ್ನು ಸಂಸ್ಥೆಯ ವತಿಯಿಂದ ಅಭಿನಂದಿಸಲಾಯಿತು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪ್ರಾಂಶುಪಾಲ ಪ್ರೊ. ಪಾರ್ಶ್ವನಾಥ ಅಜ್ರಿ ಅವರನ್ನು ಸನ್ಮಾನಿಸಿದರು.
ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಮಲ್ಲಿಕಾ ರಾವ್ ಧನ್ಯವಾದ ಸಲ್ಲಿಸಿದರು. ಶಿಬಿರಾರ್ಥಿ ಸೂರಜ್ ಸ್ವಾಗತಿಸಿದರು. ಅನ್ವಿತಾ ಕಾರ್ಯಕ್ರಮ ನಿರೂಪಿಸಿದರು.

2026-10-15



2026-10-30

2026-10-30