MOODUBIDIRE
Bidire News

2026-10-30

2026-10-30

2026-10-15

ಶ್ರೀಕ್ಷೇತ್ರ ಪುತ್ತಿಗೆಯಲ್ಲಿ ಸತ್ಯನಾರಾಯಣ ಪೂಜಾಕಟ್ಟೆ ಜೀರ್ಣೋದ್ಧಾರ ನಿವೇದನಾ ಪತ್ರ ಬಿಡುಗಡೆ

ಮೂಡುಬಿದಿರೆ: ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಾಲಯದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಕಟ್ಟೆಯ ಜೀರ್ಣೋದ್ಧಾರ ನಿವೇದನಾ ಪತ್ರವನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಂಜಿತ್ ಪೂಜಾರಿ ತೋಡಾರ್ ಹಾಗೂ ದೇವಾಲಯದ ಆಡಳಿತ ಮುಖ್ಯಸ್ಥ ಕುಲದೀಪ್ ಎಂ ಜಂಟಿಯಾಗಿ ಬಿಡುಗಡೆಗೊಳಿಸಿದರು.

ಬಳಿಕ ರಂಜಿತ್ ಪೂಜಾರಿ ತೋಡಾರ್ ನೇತೃತ್ವದಲ್ಲಿ ಸಮಿತಿಯ ಪ್ರಮುಖ ಸದಸ್ಯರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಕಟ್ಟೆಯ ಪುನರ್ನಿರ್ಮಾಣ ಕಾರ್ಯಕ್ಕೆ ಅಗತ್ಯವಿರುವ ಸಂಪೂರ್ಣ ಸಹಕಾರ ನೀಡುವುದಾಗಿ ಸಮಿತಿಯ ಪದಾಧಿಕಾರಿಗಳು ಭರವಸೆ ವ್ಯಕ್ತಪಡಿಸಿದರು.

ಸಭೆಯಲ್ಲಿ ಅಭಿಲಾಷ್ ಶೆಟ್ಟಿ ಕಟೀಲು, ರಾಜೇಂದ್ರ ಕುಮಾರ್ ಜೈನ್, ಭರತ್ ಶೆಟ್ಟಿ ಹಡಿಂಜೆಗುತ್ತು, ಉದಯ ದೇವಾಡಿಗ ಕಾನ, ಶಶಿಧರ್ ಅಂಚನ್ ಎನಕ್ರೀಪಲ್ಲ, ಸುರೇಶ್ ದಾಸ್, ಉಮೇಶ್ ಆಚಾರ್ಯ, ಕುಮಾರ್ ಪ್ರಸಾದ್, ಜಗನ್ನಾಥ ಕಾನ, ಪಳಕಳ ಮಿತ್ರ ಮಂಡಳಿಯ ಅಧ್ಯಕ್ಷ ರವಿಶಂಕರ್ ಭಟ್, ಇಂಜಿನಿಯರ್ ಸತೀಶ್ ಭಟ್ ಹಾಗೂ ಶಿಲ್ಪಿ ಮಣಿಕಂಠ ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಲಾಲ್ ಸ್ವಾಗತಿಸಿದರು. ಕೋಶಾಧಿಕಾರಿ ತೇಜಸ್ ದಾಸ್ ವಂದಿಸಿದರು.