MOODUBIDIRE
Bidire News

2026-10-30

2026-10-30

2026-10-15

ಮೂಡುಬಿದಿರೆಯಲ್ಲಿ ‘ರಾಯರುಲ್ಲೆರ್’ ತುಳು ನಾಟಕಕ್ಕೆ ಪ್ರೇಕ್ಷಕರ ಮೆಚ್ಚುಗೆ: ಪವರ್ ಫ್ರೆಂಡ್ಸ್ ಬೆದ್ರ ಸಹಯೋಗದಲ್ಲಿ ಪ್ರದರ್ಶನ

ಮೂಡುಬಿದಿರೆ: ಪವರ್ ಫ್ರೆಂಡ್ಸ್ ಬೆದ್ರ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಶನಿವಾರ ಪ್ರದರ್ಶನಗೊಂಡ ‘ರಾಯರುಲ್ಲೆರ್’ ಭಕ್ತಿ ಪ್ರಧಾನ ತುಳು ಸಾಂಸಾರಿಕ ಹಾಸ್ಯಮಯ ನಾಟಕಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಚಲನಚಿತ್ರ ನಟ ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ ಕಾರ್ಕಳದ ‘ತೆಲಿಕೆದ ತೆನಾಲಿ’ ತಂಡ ಈ ನಾಟಕವನ್ನು ಪ್ರದರ್ಶಿಸಿತು.
ನಾಟಕದ ಉದ್ಘಾಟನೆಯನ್ನು ಉದ್ಯಮಿ ಸಂಪತ್ ಸುವರ್ಣ ನೆರವೇರಿಸಿದರು.  ರಾಜೇಶ್ ಕಡಲಕೆರೆ, ಕುಮಾರ್ ಪೂಜಾರಿ, ಸಿನಿಮಾ ನಿರ್ಮಾಪಕ  ಉದಯಕಾಂತ್, ನಟ ಸುರೇಶ್ ಅಂಚನ್, ಸಮರ್ಥ್ ಬಿಲ್ಡರ್ಸ್‌ನ ಸಂದೀಪ್ ಶೆಟ್ಟಿ, ಪವರ್ ಫ್ರೆಂಡ್ಸ್ ಅಧ್ಯಕ್ಷ ವಿನಯ್, ಪದಾಧಿಕಾರಿಗಳು ಉಪಸ್ಥಿತರಿದ್ದರು.

ನಾಟಕ ಸಂಪೂರ್ಣ ಹೌಸ್‌ಫುಲ್ ಆಗಿದ್ದು, ಸುಮಾರು 500ಕ್ಕೂ ಹೆಚ್ಚು ಮಂದಿ ಪ್ರೇಕ್ಷಕರು ಸ್ಥಳಾವಕಾಶದ ಕೊರತೆಯಿಂದ ನಾಟಕ ವೀಕ್ಷಿಸಲು ಸಾಧ್ಯವಾಗದೆ ಹಿಂದಿರುಗಿದರು. ನಾಟಕದ ಪ್ರದರ್ಶನ ಅತ್ಯುತ್ತಮವಾಗಿ ಮೂಡಿಬಂದಿತು.