MOODUBIDIRE
Bidire News

ಮೂಡುಬಿದಿರೆ ಸಮಾಜ ಮಂದಿರ ದಸರಾ ಉತ್ಸವಕ್ಕೆ ಚಾಲನೆ: ಕಂಬಳ ಕ್ಷೇತ್ರದ ಸಾಧಕ ಗುಣಪಾಲ ಕಡಂಬರಿಗೆ ಸಮಾಜ ಮಂದಿರ ಪುರಸ್ಕಾರ ಪ್ರದಾನ

ಮೂಡುಬಿದಿರೆ: ಸಮಾಜ ಮಂದಿರ ಸಭಾ, ಮೂಡುಬಿದಿರೆ ವತಿಯಿಂದ ಆಯೋಜಿಸಲಾದ 79ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಭಾನುವಾರ ಸಂಜೆ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು,  ಉತ್ಸವಗಳು ಪೂರ್ವಜರು ನಮಗೆ ನೀಡಿದ ಬಳುವಳಿಯಾಗಿದ್ದು, ಮನೆಮನೆಗಳ ಪೂಜೆಗೆ ಸೀಮಿತವಾಗಿದ್ದ ದಸರಾ ಇಂದು ನಾಡಿನಾದ್ಯಂತ ಆಚರಣೆಯಾಗುತ್ತಿದೆ. ಇಂತಹ ಉತ್ಸವಗಳು ಸಾಮಾಜಿಕ ಸಾಮರಸ್ಯವನ್ನು ಕಾಪಾಡುವಲ್ಲಿ ಮಹತ್ವದ ಕೊಡುಗೆ ನೀಡಿವೆ.ಜಾತಿ, ಧರ್ಮ ಸಂಘರ್ಷರಹಿತ ಮೂಡುಬಿದಿರೆಯ ನಿರ್ಮಾಣಕ್ಕೆ ಸಮಾಜ ಮಂದಿರದಲ್ಲಿ ನಡೆಯುತ್ತಿರುವ ದಸರಾ ಸಾಂಸ್ಕೃತಿಕ ಉತ್ಸವ ಪೂರಕವಾಗಿದೆ ಎಂದು ತಿಳಿಸಿದರು.

ಸಮಾಜ ಮಂದಿರ ಪುರಸ್ಕಾರ ಪ್ರದಾನ
ವಿಶ್ರಾಂತ ಪ್ರಾಂಶುಪಾಲ ಹಾಗೂ ಕಂಬಳ ಕ್ಷೇತ್ರದ ಹಿರಿಯರಾದ ಕೆ. ಗುಣಪಾಲ ಕಡಂಬರಿಗೆ 2026ರ ಸಮಾಜ ಮಂದಿರ ಪುರಸ್ಕಾರ ಪ್ರದಾನ ಮಾಡಲಾಯಿತು.75 ವರ್ಷ ಪೂರೈಸಿದ ಡಾ. ಎಂ. ಮೋಹನ ಆಳ್ವ ಅವರನ್ನು ಸಮಾಜ ಮಂದಿರ ಸಭಾ ವತಿಯಿಂದ ಸನ್ಮಾನಿಸಲಾಯಿತು.
ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ಎಸ್. ಡಿ. ಸಾಮ್ರಾಜ್ಯ ಸೇರಿದಂತೆ ಸಭಾದ ಸದಸ್ಯರು ಉಪಸ್ಥಿತರಿದ್ದರು.

ದಸರಾ ಸಾಹಿತ್ಯ ಸಂಭ್ರಮದ ಸಂಚಾಲಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಮಾಜ ಮಂದಿರ ಸಭಾದ ಪ್ರಧಾನ ಕಾರ್ಯದರ್ಶಿ ಸುರೇಶ್ ಪ್ರಭು ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಎಂ. ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಮೂಡುಬಿದಿರೆಯ ಸವಿಗಾನ ಮೆಲೋಡಿಸ್‌ನ ಸಂತೋಷ್ ಕುಮಾರ್ ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು.

2026-10-15



2026-10-30

2026-10-30