MOODUBIDIRE
Bidire News

2026-10-30

2026-10-30

2026-10-15

ಹೊಸಬೆಟ್ಟು ಟೆಲ್ಲಿಸ್ ನಗರದಲ್ಲಿ 34 ವರ್ಷಗಳಿಂದ ಬಳಕೆಯಲ್ಲಿರುವ ವಿದ್ಯುತ್ ತಂತಿಗಳನ್ನು ಬದಲಾಯಿಸಲು ಆಗ್ರಹ: 15 ದಿನಗಳಲ್ಲಿ ಕಾಮಗಾರಿ ಆರಂಭಿಸುವುದಾಗಿ ಮೆಸ್ಕಾಂ ಅಧಿಕಾರಿಗಳ ಭರವಸೆ

ಮೂಡುಬಿದಿರೆ: ಹೊಸಬೆಟ್ಟು ಟೆಲ್ಲಿಸ್ ನಗರ ಟ್ರಾನ್ಸ್‌ಫಾರ್ಮರ್‌ಗೆ ಸಂಬಂಧಿಸಿದಂತೆ ಕಳೆದ 34 ವರ್ಷಗಳಿಂದ ಬಳಕೆಯಲ್ಲಿರುವ ಹಳೆಯ ವಿದ್ಯುತ್ ತಂತಿಗಳನ್ನು ಬದಲಾಯಿಸುವಂತೆ ಆಗ್ರಹಿಸಿ, ಹೊಸಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯ ವಿಲ್ಫ್ರೆಡ್ ಮೆಂಡೋನ್ಸಾ ಅವರ ನೇತೃತ್ವದಲ್ಲಿ ಟೆಲ್ಲಿಸ್ ನಗರ ನಿವಾಸಿಗಳು ಸೋಮವಾರ ಮೆಸ್ಕಾಂ ಕಚೇರಿಯ ಮುಂದೆ ಶಾಂತಿಯುತ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಂದರ್ಭದಲ್ಲಿ ಮೆಸ್ಕಾಂ ಅಧಿಕಾರಿಗಳು ಮುಂದಿನ 15 ದಿನಗಳೊಳಗೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು.
ಎರಡು ದಿನಗಳ ಹಿಂದೆ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿದ್ದು, ಇದರಿಂದಾಗಿ ಸಂಭವನೀಯ ಪ್ರಾಣಾಪಾಯದ ಆತಂಕ ನಿರ್ಮಾಣವಾಗಿತ್ತು. ನಿಗದಿತ ಅವಧಿಯೊಳಗೆ ಕಾಮಗಾರಿ ಆರಂಭಿಸದಿದ್ದರೆ ಮತ್ತೊಮ್ಮೆ ಪ್ರತಿಭಟನೆ ನಡೆಸಲಾಗುವುದು ಎಂದು ಟೆಲ್ಲಿಸ್ ನಗರ ನಿವಾಸಿಗಳು ಎಚ್ಚರಿಕೆ ನೀಡಿದರು.
ಹೊಸಬೆಟ್ಟು‌ ಕಥೊಲಿಕ್ ಸಭಾ ಘಟಕಾ ಅಧ್ಯಕ್ಷ ಸೆಲ್ವಿನ್ ಜೂಡ್ ಕುಲಾಸೊ, ಟೆಲ್ಲಿಸ್ ನಗರ ನಿವಾಸಿಗಳು, ಪೊಲೀಸರು ಉಪಸ್ಥಿತರಿದ್ದರು.