MOODUBIDIRE
Bidire News

ಬಹುಮುಖ ಪ್ರತಿಭೆಯ ಬಾಲಕ ಹನ್ಯಿತ್ ಆಳ್ವ: ಕಲಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ325ಕ್ಕೂ ಅಧಿಕ ವೇದಿಕೆಗಳಲ್ಲಿ ಕಲಾ ಪ್ರದರ್ಶನ

ಮೂಡುಬಿದಿರೆ: ಭರತನಾಟ್ಯ, ಸಂಗೀತ, ನಟನೆ, ಮಿಮಿಕ್ರಿ, ಭಾಷಣ, ಯಕ್ಷಗಾನ, ಭಾಗವತಿಕೆ, ಕರಾಟೆ, ಭಜನೆ, ಕುಣಿತ ಭಜನೆ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಮೆರೆದಿರುವ ಹನ್ಯಿತ್ ಆಳ್ವ, ಇದುವರೆಗೆ 325ಕ್ಕೂ ಹೆಚ್ಚು ವೇದಿಕೆಗಳಲ್ಲಿ ಭರತನಾಟ್ಯ, ಯಕ್ಷನೃತ್ಯ ಪ್ರದರ್ಶನ ನೀಡಿದ್ದಾರೆ. ಛದ್ಮವೇಷ, ಭರತನಾಟ್ಯ, ಮಿಮಿಕ್ರಿ, ಭಾಷಣ, ಕೃಷ್ಣವೇಷ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ 55ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಹಲವು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ
ಪ್ರತಿಭಾ ಕಾರಂಜಿ, ಭರತನಾಟ್ಯ, ಮಿಮಿಕ್ರಿ, ಭಾಷಣ, ಛದ್ಮವೇಷ, ಕೃಷ್ಣವೇಷ, ರಾಧಾಕೃಷ್ಣ ಸ್ಪರ್ಧೆಗಳಲ್ಲಿ ಹನ್ಶಿತ್ ಹಲವು ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳನ್ನು ಗಳಿಸಿದ್ದಾರೆ. ಕ್ಲಸ್ಟರ್, ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ. 2026ರಲ್ಲಿ ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವಿವಿಧ ರಾಧಾಕೃಷ್ಣ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಡೆದ ‘ಕಸದಿಂದ ರಸ’ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನ ಪಡೆದಿದ್ದಾರೆ.

ಪ್ರತಿಷ್ಠಿತ ವೇದಿಕೆಗಳಲ್ಲಿ ಕಲಾಪ್ರದರ್ಶನ
ಪುತ್ತಿಗೆ ಪರ್ಯಾಯೋತ್ಸವ, 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಲಕ್ನೋದಲ್ಲಿ ನಡೆದ ಕಾರ್ಯಕ್ರಮ, ಅಯೋಧ್ಯೆಯ ಯಕ್ಷಗಾನ ಪ್ರದರ್ಶನ, ಪುತ್ತಿಗೆ ಮಠದ ಭರತನಾಟ್ಯ ಕಾರ್ಯಕ್ರಮ, ರಾಜ್ಯ ಮಕ್ಕಳ ಹಬ್ಬ, ಮಕ್ಕಳ ಸಾಂಸ್ಕೃತಿಕ ಸಮ್ಮೇಳನ, ರಾಗತರಂಗದ ಯಕ್ಷನೃತ್ಯ, ಕಿರುನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಹನ್ಶಿತ್ ಕಲಾಪ್ರದರ್ಶನ ನೀಡಿದ್ದಾರೆ.

ಹಲವು ಪ್ರಶಸ್ತಿಗಳಿಗೆ ಭಾಜನ
ಆರ್ಯಭಟ ಅಂತಾರಾಷ್ಟ್ರೀಯ ಅವಾರ್ಡ್ (2024), ಸೇವಾರತ್ನ (2023), ಜನಸ್ಪಂದನ ಕಲಾಸಿರಿ ರತ್ನ (2023), ಅರಳು ಮಲ್ಲಿಗೆ ರಾಜ್ಯ ಪುರಸ್ಕಾರ (2022), ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ (2023), ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ (2024), ಕಲಾರತ್ನ (2025), ಇಂಡಿಯನ್ ಐಕಾನ್ ಅವಾರ್ಡ್ (2025), ಕನ್ನಡ ಸೇವಾರತ್ನ (2024–25), ಪದ್ಮ ರತ್ನಾಕರ ಪ್ರಶಸ್ತಿ (2025), ಸತ್ಯಶ್ರೀ (2026), ಕನ್ನಡ ಪಯಸ್ವಿನಿ ಅಚೀವ್‌ಮೆಂಟ್ ಅವಾರ್ಡ್ (2026), ಕಲಾಸೇವಾ ರತ್ನ ಪುರಸ್ಕಾರ (2026) ಸೇರಿದಂತೆ ಹಲವು ಗೌರವಗಳು ಹನ್ಶಿತ್‌ಗೆ ಲಭಿಸಿವೆ.
ಕಣಿಪುರ ಶ್ರೀ ಗಣೇಶೋತ್ಸವ ಸಮಿತಿ, ರಾಗತರಂಗ, ಬಂಟರ ಸಂಘ ವರ್ಕಾಡಿ ವಲಯ, ಶಿವಶಕ್ತಿ ಫ್ರೆಂಡ್ಸ್ ಕ್ಲಬ್ ಬಾಕ್ರಬೈಲ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಹನ್ಶಿತ್ ಅವರನ್ನು ಸನ್ಮಾನಿಸಿವೆ. ಆಕಾಶವಾಣಿ ಬಾಲವೃಂದ, ರೇಡಿಯೋ ಮಣಿಪಾಲ್, ಅಭಿಮತ ವಾಹಿನಿ, ಕಾರವಲ್ ಪತ್ರಿಕೆಗಳಲ್ಲಿ ಇವರ ಪ್ರತಿಭೆ, ಸಾಧನೆಗಳು ಪರಿಚಯಗೊಂಡಿವೆ.

ಕಲಾಭ್ಯಾಸ, ಶೈಕ್ಷಣಿಕ ಸಾಧನೆ
ಕೆದಿಂಜೆ ಪರಾರಿ ಗಣೇಶ್ ಆಳ್ವ (ಕೋಟೆಕುಂಜ), ಬಾಯಾರುಗುತ್ತು ಬಬಿತಾ ಆಳ್ವ (ಮೇಗಿನ ದೈಲ, ಬಾಕ್ರಬೈಲ್) ದಂಪತಿಯ ಪುತ್ರನಾದ ಹನ್ಯಿತ್ ಆಳ್ವ, ಕೋಟೆಕುಂಜ ಜಗನ್ನಿವಾಸ ಆಳ್ವ, ಬಾಕ್ರಬೈಲು ದೈಲ ಮಂಜಣ್ಣ ಆಳ್ವರ ಪೌತ್ರ. ಪ್ರಸ್ತುತ ಕೊಣಾಜೆಯ ವಿಶ್ವಮಂಗಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಶೇ.89 ಅಂಕ ಗಳಿಸಿರುವ ಹನ್ಯಿತ್ ಆಳ್ವ, ಕರಾಟೆಯಲ್ಲಿ ಹಳದಿ ಬೆಲ್ಟ್ ಪಡೆದಿದ್ದಾರೆ. ಇಂಟರ್ ಡೋಜೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ವಿದುಷಿ ಸ್ವಾತಿ ಭಟ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ, ಮಂಜುಳಾ ಜಿ. ರಾವ್ ಅವರಲ್ಲಿ ಸಂಗೀತ, ಸಂಪತ್ ಅವರಲ್ಲಿ ಕರಾಟೆ, ಪ್ರಸಾದ್ ಚೇರ್ಕಾಡಿ, ಅಶ್ವತ್ ಮಂಜನಾಡಿ ಅವರಲ್ಲಿ ಯಕ್ಷಗಾನ, ಭಾಗವತಿಕೆ ಅಭ್ಯಾಸ ಮಾಡುತ್ತಿದ್ದಾರೆ.

2026-10-15



2026-10-30

2026-10-30