MOODUBIDIRE
Bidire News

2026-10-30

2026-10-30

2026-10-15

ನೆಲ್ಲಿ ರಾಜರಾಜೇಶ್ವರೀ ಕ್ಷೇತ್ರ, ಸದ್ಗುರು ನಿತ್ಯಾನಂದ ಮಂದಿರದಲ್ಲಿ ನವರಾತ್ರಿ ಮಹೋತ್ಸವ: ಅ. 20ರಂದು ಚಂಡಿಕಾಯಾಗ

ಕಾರ್ಕಳ: ನಿಟ್ಟೆ ಗ್ರಾಮದ ನೆಲ್ಲಿ ರಾಜರಾಜೇಶ್ವರೀ ಕ್ಷೇತ್ರ ಹಾಗೂ ಸದ್ಗುರು ನಿತ್ಯಾನಂದ ಮಂದಿರದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಮಹೋತ್ಸವ ನಡೆಯಲಿದೆ.
ಪ್ರತಿದಿನ ರಾತ್ರಿ 7 ಗಂಟೆಯಿಂದ ಭಜನೆ, ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು, ಅಕ್ಟೋಬರ್ 20ರಂದು ಚಂಡಿಕಾಯಾಗ, ಮಹಾಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿದೆ.

ಜಗನ್ನಾಥ್, ಸುನೀಲ್ ಕೆ.ಆರ್., ವಿ. ಸುನಿಲ್ ಕುಮಾರ್, ನಿತ್ಯಾನಂದ ಭಟ್ ಮತ್ತು ಮಹಾಬಲ ಸುವರ್ಣ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಭಕ್ತ ಮಂಡಳಿ, ಮಹಿಳಾ ಮಂಡಳಿ ಹಾಗೂ ರಾಜರಾಜೇಶ್ವರಿ ಟ್ರಸ್ಟ್ ಕಾರ್ಯಕ್ರಮಗಳನ್ನು ಆಯೋಜಿಸಿವೆ.