MOODUBIDIRE
Bidire News

2026-10-30

2026-10-30

2026-10-15

ಮಾಡೆಲಿಂಗ್ ಆಮಿಷ: ಮೂಡುಬಿದಿರೆಯ ಯುವ ವೈದ್ಯೆಗೆ ಸುಮಾರು ₹15.35 ಲಕ್ಷ ವಂಚನೆ

ಮೂಡುಬಿದಿರೆ: ಮಾಡೆಲಿಂಗ್ ಹಾಗೂ ಫೋಟೋಶೂಟ್ ಆಮಿಷವೊಡ್ಡಿ, ಕಪ್ಪು ಹಣ ಮತ್ತು ಚಿನ್ನದ ಗಟ್ಟಿಗಳ ನೆಪದಲ್ಲಿ ಮೂಡುಬಿದಿರೆಯ ಯುವ ವೈದ್ಯೆಯೊಬ್ಬರಿಗೆ ₹15.35 ಲಕ್ಷ ಮೌಲ್ಯದ ಹಣ, ಚಿನ್ನಾಭರಣ ಹಾಗೂ ಮೊಬೈಲ್ ಫೋನ್ ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಂಬಿಕೆ ಗಳಿಸಿ ಹಣ ವರ್ಗಾಯಿಸಿಕೊಂಡಿದ್ದಲ್ಲದೆ, ವೈಯಕ್ತಿಕ ದಾಖಲೆಗಳು ಮತ್ತು ಫೋಟೋಗಳನ್ನು ಪಡೆದುಕೊಂಡು, ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಾಡೆಲಿಂಗ್, ಆದಾಯ ತೆರಿಗೆ ಸಮಸ್ಯೆ ಪರಿಹಾರ ಹಾಗೂ ಕಪ್ಪು ಹಣದ ನೆಪದಲ್ಲಿ ವಂಚನೆ ನಡೆದಿರುವುದಾಗಿ ವೈದ್ಯೆ ದೂರಿನಲ್ಲಿ ತಿಳಿಸಿದ್ದಾರೆ.