MOODUBIDIRE
Bidire News

2026-10-30

2026-10-30

2026-10-15

ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಅ. 11ರಿಂದ 20ರವರೆಗೆ ನವರಾತ್ರಿ ಮಹೋತ್ಸವ

ಮೂಡುಬಿದಿರೆ: ಕೊಡಂಗಲ್ಲು ಶ್ರೀ ಉಚ್ಚಂಗಿ ಮಾರಿಯಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 11ರಿಂದ 20ರವರೆಗೆ ನವರಾತ್ರಿ ಪೂಜಾ ಮಹೋತ್ಸವ ನಡೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಅಕ್ಟೋಬರ್ 20ರಂದು ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ.
ಅಕ್ಟೋಬರ್ 11ರಂದು ಬೆಳಗ್ಗೆ 6 ಗಂಟೆಗೆ ಗಣಹೋಮ ಮತ್ತು ಬಲಿಮೂರ್ತಿ ಪ್ರತಿಷ್ಠೆ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ತೆನೆಹಾಕುವ ಕಾರ್ಯಕ್ರಮ ಜರುಗಲಿದೆ. ಪ್ರತಿದಿನ ಬೆಳಗ್ಗೆ 9 ಗಂಟೆಗೆ ದೇವಿಯ ಬಲಿಮೂರ್ತಿ ಪ್ರತಿಷ್ಠೆ, ಅಲಂಕಾರ ಪೂಜೆ ಮತ್ತು ನವರಾತ್ರಿ ಪೂಜೆ ನೆರವೇರಲಿದೆ. ಮಧ್ಯಾಹ್ನ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ, ಸಂಜೆ 7 ಗಂಟೆಗೆ ಭಜನೆ ಮತ್ತು ರಾತ್ರಿ 9 ಗಂಟೆಗೆ ಮಹಾಪೂಜೆ ನಡೆಯಲಿದೆ.
ಭಕ್ತಾದಿಗಳಿಗೆ ಅಲಂಕಾರ ಪೂಜೆ, ಹೂವಿನ ಪೂಜೆ, ಕುಂಕುಮಾರ್ಚನೆ, ಗದ್ದಿಗೆ ಪೂಜೆ, ಕರ್ಪೂರಾರತಿ ಹಾಗೂ ವಾಹನ ಪೂಜೆಗಳನ್ನು ಮಾಡಿಸಲು ಅವಕಾಶವಿದೆ.
ಅಕ್ಟೋಬರ್ 20ರಂದು ಮಧ್ಯಾಹ್ನ 12.30ಕ್ಕೆ ದೇವಸ್ಥಾನದ ಮಂಡಳಿಯ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ 4 ಗಂಟೆಗೆ ಶಿವನಟನಂ ನೃತ್ಯ ಕೇಂದ್ರದ ಮಕ್ಕಳಿಂದ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ. ಸಂಜೆ 5 ಗಂಟೆಗೆ ದರ್ಶನ, ಭಕ್ತರಿಗೆ ಅಭಯನುಡಿ ಹಾಗೂ ದೇವಸ್ಥಾನದ ಸುತ್ತು ಬಲಿಮೂರ್ತಿ ಪ್ರದಕ್ಷಿಣೆ ಜರುಗಲಿದೆ. ಸಂಜೆ ದರ್ಶನದ ಬಳಿಕ ದೇವರ ಹರಕೆಯ ಸೀರೆಗಳನ್ನು ಏಲಂ ಮಾಡಲಾಗುವುದು ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ದೇಜು , ಉಪಾಧ್ಯಕ್ಷ ಸಂತೋಷ್ ಕೆ., ಕಾರ್ಯದರ್ಶಿ ಸಂದೀಪ್ ಕೆ., ಜತೆ ಕಾರ್ಯದರ್ಶಿಗಳಾದ ರಮೇಶ್ ಕೆ.ಎಸ್. ಮತ್ತು ಪ್ರಕಾಶ್ ತಿಳಿಸಿದ್ದಾರೆ.