MOODUBIDIRE
Bidire News

2026-10-30

2026-10-30

2026-10-15

ಅ.11ರಿಂದ 19ರವರೆಗೆ ಇರುವೈಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಶರನ್ನವರಾತ್ರಿ ಉತ್ಸವ

ಮೂಡುಬಿದಿರೆ: ಇರುವೈಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅ.11ರಿಂದ 19ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ನವರಾತ್ರಿಯ ಅಂಗವಾಗಿ ಅ.15ರಂದು ಲಲಿತಾ ಪಂಚಮಿ, ಅ.17ರಂದು ಮೂಲ ನಕ್ಷತ್ರ ಹಾಗೂ ಅ.19ರಂದು ಮಹಾನವಮಿ ಆಚರಿಸಲಾಗುವುದು. ಅ.20ರಂದು ವಿಜಯದಶಮಿ ನಡೆಯಲಿದೆ. ಅ.16 ಮತ್ತು 18ರಂದು ಭಕ್ತರಿಂದ ಚಂಡಿಕಾ ಹೋಮ ಸೇವೆ ನೆರವೇರಲಿದೆ.
ಅ.14ರಂದು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ಮಹಿಳಾ ಯಕ್ಷ ಕೂಟ ಕದ್ರಿ, ಮಂಗಳೂರು ಇವರಿಂದ ‘ಶಕ್ರಾರಿಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಅ.17ರಂದು ರಾತ್ರಿ 8.30ರಿಂದ ಯಕ್ಷಲಯ ಇರುವೈಲು ಇವರಿಂದ ‘ಶಾಂಭವಿ ವಿಲಾಸ’ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ನವರಾತ್ರಿಯ ಪ್ರತಿದಿನ ಭಕ್ತರಿಂದ ರಂಗಪೂಜೆ ಸೇವೆ ನಡೆಯಲಿದೆ. ಮಹಾಪೂಜೆಯ ಬಳಿಕ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ 7ರಿಂದ 8ರವರೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.