MOODUBIDIRE
Bidire News

2026-10-30

2026-10-30

2026-10-15

ಅ.11 ರಿಂದ 15ರವರೆಗೆ ಮೂಡುಬಿದಿರೆ ಸಮಾಜ ಮಂದಿರ 79ನೇ ದಸರಾ

ಮೂಡುಬಿದಿರೆ: ಸಮಾಜ ಮಂದಿರ ಸಭಾ ಮೂಡುಬಿದಿರೆ ವತಿಯಿಂದ 79 ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಮೂಡುಬಿದಿರೆ ದಸರಾ ಐದು ದಿನಗಳ ಉತ್ಸವ ಅ11 ರಿಂದ 15ರವರೆಗೆ ಪ್ರತೀ ದಿನ ಸಂಜೆ 7 ರಿಂದ ಸಮಾಜ ಮಂದಿರದಲ್ಲಿ ಜರಗಲಿದೆ. 

ಈ ಬಾರಿ ಅ11 ರಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮೂಡುಬಿದಿರೆ ದಸರಾವನ್ನು ಉದ್ಘಾಟಿಸಲಿದ್ಧಾರೆ. ವಿಶ್ರಾಂತ ಪ್ರಾಂಶುಪಾಲ, ಜಾನಪದ ತಜ್ಞ  ಕೆ. ಗುಣಪಾಲ ಕಡಂಬ ಅವರಿಗೆ 2026ರ ಸಮಾಜ ಮಂದಿರ ಪುರಸ್ಕಾರ ಪ್ರದಾನ ನಡೆಯಲಿದೆ. ಸಮಾಜ ಮಂದಿರ ಸಭಾದ ಅಧ್ಯಕ್ಷ  ಕೆ. ಅಭಯಚಂದ್ರ ಜೈನ್, ಅಧಕ್ಷತೆ ವಹಿಸಲಿದ್ದಾರೆ. ಬಳಿಕ ಸವಿಗಾನ ಮೆಲೋಡಿಸ್ ಮೂಡುಬಿದಿರೆ ಇದರ  ಸಂತೋಷ್ ಕುಮಾರ್ ಮತ್ತು ಬಳಗದವರಿಂದ ಸಂಗೀತ ರಸ ಮಂಜರಿ ನಡೆಯಲಿದೆ. 

ಸರಣಿ ಉಪನ್ಯಾಸ: ಅ12 ರಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ ' ನಗು - ಒಂದು ದಿವ್ಯೌಷದ ' ಕುರಿತು ಉಪನ್ಯಾಸ  ನೀಡಲಿದ್ದಾರೆ.  ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಅಧ್ಯಕ್ಷತೆ ವಹಿಸಲಿದ್ದಾರೆ. 
ಅ13 ರಂದು ವಿಶ್ರಾಂತ ಪ್ರಾಂಶುಪಾಲ ಪ್ರೊ. ಎಂ. ಬಾಲಕೃಷ್ಣ ಶೆಟ್ಟಿ ಸಾಲಿಗ್ರಾಮ ' ನಗು - ಒಂದು ದಿವ್ಯೌಷದ ' ಕುರಿತು ಉಪನ್ಯಾಸ  ನೀಡಲಿದ್ದಾರೆ.  ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ  ಯಕ್ಷ ಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ  ನಡೆಯಲಿದೆ. 

ಅ13 ರಂದು  ವರ್ಧಮಾನ ಪ್ರಶಸ್ತಿ ಪೀಠ  ಮೂಡುಬಿದಿರೆ ಇದರ 2025 ಸಾಲಿನ 
'ವರ್ಧಮಾನ ಪ್ರಶಸ್ತಿ ಪ್ರದಾನ' ಮೂಡುಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಶ್ರೀಗಳವರ ಉಪಸ್ಥಿತಿಯಲ್ಲಿ ಜರಗಲಿದೆ. 
ಡಾ. ಪಾದೇಕಲ್ಲು ವಿಷ್ಣುಭಟ್ , ಉಡುಪಿ (ವರ್ಧಮಾನ ಸಾಹಿತ್ಯ ಪ್ರಶಸ್ತಿ ) 
ಶ್ರೀ ಟಿ.ಎ.ಎನ್. ಖಂಡಿಗೆ, ಮೂಡುಬಿದಿರೆ (ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ) ಅವರಿಗೆ 
ವರ್ಧಮಾನ ಪ್ರಶಸ್ತಿ ಪೀಠ ಅಧ್ಯಕ್ಷ  ಎಸ್. ಡಿ. ಸಂಪತ್ ಸಾಮ್ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. 
ನಂತರ ಸನಾತನ ನಾಟ್ಯಾಲಯ, ಮಂಗಳೂರು ನಾಟ್ಯ ಕಲಾ ವಿದುಷಿ ಶ್ರೀಮತಿ ಶಾರದಾಮಣಿ ಶೇಖರ್ ಇವರ ಮೂಡುಬಿದಿರೆ ಮತ್ತು ಮಂಗಳೂರಿನ ಶಿಷ್ಯರಿಂದ 'ಸನಾತನ ನಾಟ್ಯಾಂಜಲಿ' ಕಾರ್ಯಕ್ರಮವಿದೆ. 

ಅ 15 ರಂದು ಪುತ್ತೂರಿನ ಡಾ. ಶ್ರೀಶಕುಮಾರ್ ಎಂ.ಕೆ 'ಶಿಕ್ಷಣಕ್ಕೊಂದು ಹೊಸತನ' ಕುರಿತು ಉಪನ್ಯಾಸ  ನೀಡಲಿದ್ದಾರೆ.ಮೂಡುಬಿದಿರೆ ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್ ಎಂ.ಪಿ. ಅಧ್ಯಕ್ಷತೆ ವಹಿಸಲಿದ್ದಾರೆ.
ನಂತರ ಆರಾಧನಾ ನೃತ್ಯಕೇಂದ್ರ, ಮೂಡುಬಿದಿರೆ ನಾಟ್ಯ ವಿದುಷಿ ಶ್ರೀಮತಿ ಸುಖದಾ ಬರ್ವೆ ಇವರ ಶಿಷ್ಯರಿಂದ 'ನೃತ್ಯ ಸಿಂಚನ' ನಡೆಯಲಿದೆ. 
 ಸೆ 15 ರಂದು ಸಮಾರೋಪ ಸಮಾರಂಭದಲ್ಲಿ  ವಿಟ್ಲದ ತಾಳಮದ್ದಳೆ ಅರ್ಥದಾರಿ,  ಲೇಖಕ
ರಾಧಾಕೃಷ್ಣ ಕಲ್ಚಾರ್ 'ಯಕ್ಷಗಾನ ಕಲಾಸ್ವಾದನೆ' ಕುರಿತು ಉಪನ್ಯಾಸ  ನೀಡಲಿದ್ದಾರೆ. ವಕೀಲರ ಸಂಘ ಮೂಡುಬಿದಿರೆ ಅಧ್ಯಕ್ಷ ಅಧ್ಯಕ್ಷ ಶರತ್ ಡಿ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
 ನಂತರ ಟಾಪ್ ಎಂಟರ್ಟೈನರ್ಸ್ ಡ್ಯಾನ್ಸ್ ಅಕಾಡೆಮಿ, ಮೂಡುಬಿದಿರೆ ಇದರ ಎಂ. ರೂಪೇಶ್ ಕುಮಾರ್ ನಿರ್ದೇಶನದಲ್ಲಿ 'ನೃತ್ಯ ವೈವಿಧ್ಯ' ನಡೆಯಲಿದೆ. 
ಉತ್ಸವದಲ್ಲಿ ಸಮಾಜ ಮಂದಿರ ಗೌರವ, ಪುಸ್ತಕ ಪ್ರದರ್ಶನ , ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದು ಸಮಾಜ ಮಂದಿರ ಸಭಾದ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ತಿಳಿಸಿದ್ದಾರೆ.