MOODUBIDIRE
Bidire News

2026-10-30

2026-10-30

2026-10-15

ನಿಡ್ಡೋಡಿ ಕೃಷಿ ನಾಶ: ವಿಷ ಸೇವನೆಗೆ ಮುಂದಾದ ರೈತ ಮುಖಂಡ ಅಲ್ಫೋನ್ಸ್ ಡಿಸೋಜ – ಸ್ಥಳೀಯರಿಂದ ಪ್ರತಿಭಟನೆ

ಮೂಡುಬಿದಿರೆ: ಯಾವುದೇ ಮುನ್ಸೂಚನೆ ನೀಡದೆ ಸ್ಟೆರ್‌ಲೈಟ್ ಕಂಪನಿಯವರು ಏಕಾಏಕಿ ಫಲವತ್ತಾದ ಕೃಷಿ ಭೂಮಿಯನ್ನು ನಾಶಪಡಿಸಿರುವ ಆರೋಪ ನಿಡ್ಡೋಡಿ ಗ್ರಾಮದಲ್ಲಿ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತ ರೈತ ಹಾಗೂ ರೈತ ಸಂಘದ ಕಾರ್ಯಕರ್ತ ಅಲ್ಫೋನ್ಸ್ ಡಿಸೋಜ ಸೋಮವಾರ ಬೆಳಗ್ಗೆ ನಾಶಗೊಂಡ ಭತ್ತದ ಗದ್ದೆ ಬಳಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.


ತೆನೆ ಬಿಡುವ ಹಂತದಲ್ಲಿದ್ದ ಫಲವತ್ತಾದ ಭತ್ತದ ಬೆಳೆ ಸಂಪೂರ್ಣ ಹಾನಿಗೊಂಡಿದ್ದು, ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಅವರು ದೂರಿದರು. “ಯಾವುದೇ ಪೂರ್ವ ಸೂಚನೆ ನೀಡದೆ ನಮ್ಮ ಭತ್ತದ ಬೆಳೆ ಹಾಳು ಮಾಡಲಾಗಿದೆ. ನಾನು ಅನಾರೋಗ್ಯದಿಂದ ಬಳಲುತ್ತಿದ್ದು, ನನ್ನ ಜೀವಕ್ಕೆ ಏನಾದರೂ ಆದರೆ ಅದಕ್ಕೆ ಸ್ಟೆರ್‌ಲೈಟ್ ಕಂಪನಿಯೇ ನೇರ ಹೊಣೆಗಾರರು,” ಎಂದು ಅಲ್ಫೋನ್ಸ್ ಡಿಸೋಜ ಆರೋಪಿಸಿದರು.

ಘಟನೆ ಕುರಿತು ಸೂಕ್ತ ತನಿಖೆ ನಡೆಸಿ ಹಾನಿಗೆ ತಕ್ಷಣ ಪರಿಹಾರ ಒದಗಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಘಟನೆಯ ಸುದ್ದಿ ತಿಳಿದು ರೈತರು ಹಾಗೂ ಸ್ಥಳೀಯರು ಸ್ಥಳಕ್ಕೆ ಆಗಮಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೃಷಿ ಭೂಮಿ ಹಾನಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಿ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.