MOODUBIDIRE
Bidire News

ಬಡಗಮಿಜಾರು: ಕರ್ತವ್ಯಕ್ಕೆ ಅಡ್ಡಿ, ಆತ್ಮಹತ್ಯೆಗೆ ಯತ್ನ ಪ್ರಕರಣ — ರೈತ ಮುಖಂಡ ಅಲ್ಫೋನ್ಸ್ ಡಿಸೋಜ ಬಂಧನ

ಯಾವುದೇ ಮುನ್ಸೂಚನೆ ನೀಡದೆ ಸ್ಟೆರ್‌ಲೈಟ್ ಕಂಪನಿಯವರು ಏಕಾಏಕಿ ಫಲವತ್ತಾದ ಕೃಷಿ ಭೂಮಿಯನ್ನು ನಾಶಪಡಿಸಿರುವ ಆರೋಪಿಸಿ ಕೃಷಿಕ, ಹೋರಾಟಗಾರ ಅಲ್ಫೋನ್ಸ್ ಡಿಸೋಜ ಸೋಮವಾರ ಬೆಳಗ್ಗೆ ಬಡಗಮಿಜಾರು ಗ್ರಾಮದ ಮಂಜನಬೈಲಿನಲ್ಲಿರುವ ನಾಶಗೊಂಡ ಭತ್ತದ ಗದ್ದೆ ಬಳಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಅಲ್ಫೋನ್ಸ್ ಡಿಸೋಜ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ ಆರೋಪದ ಜೊತೆಗೆ ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ  ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಅಲ್ಫೋನ್ಸ್ ಡಿಸೋಜ ಅವರನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಾಗಿದೆ.

2026-10-15



2026-10-30

2026-10-30