MOODUBIDIRE
Bidire News

ಮೂಡುಬಿದಿರೆ ನಾಗರಕಟ್ಟೆ ಬಿದಿರುಮನೆಯ ಜಗನ್ನಾಥ ಶೆಟ್ಟಿ ನಿಧನ

ಮೂಡುಬಿದಿರೆ:  ನಾಗರಕಟ್ಟೆ ಬಿದಿರುಮನೆಯ ಜಗನ್ನಾಥ ಶೆಟ್ಟಿ (70) ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಜಗ್ಗು ಶೆಟ್ಟಿ ಎಂದೇ ಖ್ಯಾತರಾಗಿದ್ದ ಅವರು ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದರು.

ಕಳೆದ ಹಲವು ವರ್ಷಗಳಿಂದ ಕಂಬಳ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಜಗ್ಗು ಶೆಟ್ಟಿ, ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್ ಹಾಗೂ ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್ ಅವರ ಆತ್ಮೀಯರಾಗಿದ್ದರು. ಅವರ ಕಂಬಳ ತಂಡದಲ್ಲಿ ಸಹಕರಿಸುತ್ತಿದ್ದರು.

‘ಕಂಬಳ ಕ್ಷೇತ್ರದಲ್ಲಿ ನಮ್ಮ ತಂಡವು ಇಷ್ಟು ಹೆಸರು ಗಳಿಸಬೇಕಾದರೆ ಅದರ ಹಿಂದೆ ಜಗ್ಗಣ್ಣನ ಪಾತ್ರ ದೊಡ್ಡದಿತ್ತು’ ಎಂದು ಚಂದ್ರಹಾಸ ಸನಿಲ್ ಸಂತಾಪ ವ್ಯಕ್ತಪಡಿಸಿದ್ದಾರೆ.