MOODUBIDIRE
Bidire News

ಶೃಂಗೇರಿ ಶಾರದಾ ಪೀಠದ ದಸರಾ ಉತ್ಸವದಲ್ಲಿ ಮೂಡುಬಿದಿರೆಯ ಐಶ್ವರ್ಯ ದಿನೇಶ್, ಅದ್ವಿತ್‌ನಿಂದ ಸ್ಥಬ್ಧಚಿತ್ರ ಪ್ರದರ್ಶನ

ಮೂಡುಬಿದಿರೆ: ಜಗದ್ಗುರು ಆದಿ ಶಂಕರಾಚಾರ್ಯರು ಸ್ಥಾಪಿಸಿದ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಂ ಶೃಂಗೇರಿಯಲ್ಲಿ ನಡೆದ ನವರಾತ್ರಿ ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಮೂಡುಬಿದಿರೆ ತಾಲೂಕನ್ನು ಪ್ರತಿನಿಧಿಸಿ, ಐಶ್ವರ್ಯ ದಿನೇಶ್ ಶಾರದೆಯಾಗಿ ಹಾಗೂ ಅದ್ವಿತ್ ವಿಷ್ಣುಧಾರಿಯಾಗಿ ಸ್ಥಬ್ಧಚಿತ್ರದಲ್ಲಿ ಗಮನ ಸೆಳೆದರು.
ದಸರಾ ಮಹೋತ್ಸವದ ಅಂಗವಾಗಿ ನಡೆದ ಸ್ಥಬ್ಧಚಿತ್ರ ಪ್ರದರ್ಶನದಲ್ಲಿ ಮೂಡುಕೊಣಾಜೆ ಕುಕ್ಕುದಕಟ್ಟೆಯ ದಿನೇಶ್ ಎಂ. ಕೊಣಾಜೆ, ಹಾಗೂ ಗೀತಾ ದಿನೇಶ್ ದಂಪತಿಯ ಮಕ್ಕಳಾದ ಐಶ್ವರ್ಯ ಮತ್ತು ಅದ್ವಿತ್ ಭಾಗವಹಿಸಿದ್ದರು. ಶೃಂಗೇರಿ ಶಾರದಾಂಬಾ ಪೀಠದ ಉತ್ಸವದಲ್ಲಿ ಶಾರದೆಯಾಗಿ ಐಶ್ವರ್ಯ ದಿನೇಶ್ ಹಾಗೂ ವಿಷ್ಣುಧಾರಿಯಾಗಿ ಮಾಸ್ಟರ್ ಅದ್ವಿತ್ ವೇಷ ಧರಿಸಿದರು.
ಈ ಕುರಿತು ಮಕ್ಕಳ ತಾಯಿ ಗೀತಾ ದಿನೇಶ್ ತಮ್ಮ ಅಭಿಪ್ರಾಯ  ಹಂಚಿಕೊಂಡಿದ್ದಾರೆ. “ಇದು ಕೇವಲ ವೇಷವಲ್ಲ, ಇದು ನನ್ನ ಕನಸು. ನನ್ನ ಮಕ್ಕಳು ಇಂತಹ ಪವಿತ್ರ ಪೀಠದಲ್ಲಿ, ಇಂತಹ ದೊಡ್ಡ ಉತ್ಸವದಲ್ಲಿ ನಮ್ಮ ಊರನ್ನು ಪ್ರತಿನಿಧಿಸಬೇಕು ಎಂಬ ಕನಸು ಇಂದು ನನಸಾಗಿದೆ.  ಎಂದು ತಿಳಿಸಿದ್ದಾರೆ.