MOODUBIDIRE
Bidire News

ಹುಟ್ಟುಹಬ್ಬಕ್ಕೆ ಭಜನಾ ಸೇವೆಯ ಭಕ್ತಿಯ ಸ್ಪರ್ಶ: :ಪುತ್ತಿಗೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದಲ್ಲಿ ಅರ್ಥಪೂರ್ಣ ಆಚರಣೆ

ಮೂಡುಬಿದಿರೆ: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದ ಟ್ರಸ್ಟಿ ಡಾ. ಪ್ರಕಾಶ್ ಮೂಡುಬಿದಿರೆ ಅವರ ಹುಟ್ಟುಹಬ್ಬದ ಪ್ರಯುಕ್ತ ಸಂಪಿಗೆ–ಪುತ್ತಿಗೆಯ ಮಂದಿರದಲ್ಲಿ ಗುರುರಾಯರಿಗೆ ವಿಶೇಷ ಭಜನಾ ಸೇವೆ ಸಲ್ಲಿಸಲಾಯಿತು.
ಮಂದಿರದ ನಿರ್ಮಾತೃ ಕಿಶೋರ್ ಕೊಟ್ಯಾನ್ ಅವರ ಮಂದಿರದಲ್ಲಿ ನಡೆದ ಸೇವೆಯಲ್ಲಿ ಮುಖ್ಯ ಅರ್ಚಕ ಜನಾರ್ದನ್ ಭಟ್ ಪೂಜೆ ನೆರವೇರಿಸಿ ಗುರುರಾಯರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಹಾಗೂ ಮಹಿಷಮರ್ದಿನಿ ಭಜನಾ ತಂಡದ ಭಜಕರು ಭಕ್ತಿಯಿಂದ ಭಜನೆಗಳನ್ನು ಹಾಡಿ ಗುರುರಾಯರಿಗೆ ಸೇವೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯ ಕಾರ್ಯದರ್ಶಿ ಆನಂದ್, ಎನಿಕ್ರಿಪಲ್ಲ ಪುತ್ತಿಗೆಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಶಶಿಧರ್ ಎಸ್. ಅಂಚನ್, ಮಂಜುನಾಥ್ ಸಂಪಿಗೆ ಸೇರಿದಂತೆ ಭಜನಾ ಮಂಡಳಿಯ ಮಕ್ಕಳು, ಪೋಷಕರು ಹಾಗೂ ವಾರದ ಭಜನಾ ಸೇವೆಯಲ್ಲಿ ಭಾಗವಹಿಸುವ ಸದಸ್ಯರು ಉಪಸ್ಥಿತರಿದ್ದರು.
ಇಂದಿನ ದಿನಗಳಲ್ಲಿ ಹುಟ್ಟುಹಬ್ಬವನ್ನು ಪಾರ್ಟಿ, ಕೇಕ್ ಹಾಗೂ ಅದ್ದೂರಿ ಆಚರಣೆಯ ಮೂಲಕ ಆಚರಿಸುವುದು ಸಾಮಾನ್ಯವಾಗಿದೆ. ಆದರೆ, ಹುಟ್ಟುಹಬ್ಬದ ದಿನವನ್ನು ದೇವರ ಸ್ಮರಣೆ, ಭಜನೆ ಮತ್ತು ಭಕ್ತಿಸೇವೆಯ ಮೂಲಕ ಆಚರಿಸುವುದು ವಿಭಿನ್ನ ಚಿಂತನೆಯಾಗಿದೆ.
ಡಾ. ಪ್ರಕಾಶ್ ಮೂಡುಬಿದಿರೆ ಅವರ ಹುಟ್ಟುಹಬ್ಬದ ಪ್ರಯುಕ್ತ ನಡೆದ ಈ ಭಜನಾ ಸೇವೆಯು ವೈಯಕ್ತಿಕ ಸಂಭ್ರಮವನ್ನು ಆಧ್ಯಾತ್ಮಿಕ ಅನುಭವದೊಂದಿಗೆ ಬೆಸೆಯುವ ಪ್ರಯತ್ನವಾಗಿದೆ.
ಇಂತಹ ಆಚರಣೆ ಪ್ರತಿಯೊಂದು ಊರಿನಲ್ಲೂ, ಪ್ರತಿಯೊಂದು ಮನೆಯಲ್ಲೂ ಮೂಡಿಬರಲಿ. ಹುಟ್ಟುಹಬ್ಬದ ಆಚರಣೆಯಲ್ಲಿ ಭಕ್ತಿ ಮತ್ತು ಸಂಸ್ಕಾರಕ್ಕೂ ಸ್ಥಾನ ಸಿಗಲಿ. ಇಂತಹ ಆಚರಣೆಗಳು ಎಲ್ಲರಿಗೂ ಮಾದರಿಯಾಗಿ, ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ ನೀಡುವ ಪ್ರೇರಣೆಯಾಗಲಿ ಎಂಬ ಆಶಯ ವ್ಯಕ್ತವಾಗಿದೆ.