MOODUBIDIRE
Bidire News

ಶಿರ್ತಾಡಿ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ನವರಾತ್ರಿ ಉತ್ಸವ: ನವದುರ್ಗೆಯರ ನೃತ್ಯ ಪ್ರದರ್ಶನ-ವಿದ್ಯಾರ್ಥಿಗಳು, ಶಿಕ್ಷಕರಿಂದ ದಾಂಡಿಯಾ ನೃತ್ಯ

ಮೂಡುಬಿದಿರೆ: ಶಿರ್ತಾಡಿಯ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನವರಾತ್ರಿ ಉತ್ಸವವನ್ನು ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ನವದುರ್ಗೆಯರ ವಿವಿಧ ರೂಪಗಳನ್ನು ಪರಿಚಯಿಸುವ ನೃತ್ಯ ಪ್ರದರ್ಶನ ನಡೆಯಿತು. 

ಮಹಿಷಾಸುರನ ಪ್ರವೇಶದೊಂದಿಗೆ ಮೂಡಿಬಂದ ನವದುರ್ಗೆಯರ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಟ್ಟಾಗಿ ಪ್ರದರ್ಶಿಸಿದ ದಾಂಡಿಯಾ ನೃತ್ಯ ಉತ್ಸವಕ್ಕೆ ಮೆರುಗು ನೀಡಿತು.

ಮುಖ್ಯ ಶಿಕ್ಷಕಿ ಬಿಂದು ಮ್ಯಾಕ್ಸಿಮ್ ಡಿಸೋಜ, ನವರಾತ್ರಿ ಹಬ್ಬದ ಮಹತ್ವ, ದುಷ್ಟಶಕ್ತಿಯ ವಿರುದ್ಧ ಶಕ್ತಿಯ ವಿಜಯ ಹಾಗೂ ಸತ್ಯದ ಗೆಲುವಿನ ಸಂದೇಶದ ಕುರಿತು ಮಾತನಾಡಿದರು.

ವನಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.