MOODUBIDIRE
Bidire News

ಡಾ. ಡಿ. ವೀರೇಂದ್ರ ಹೆಗ್ಗಡೆಯವರ 59ನೇ ಪಟ್ಟಾಭಿಷೇಕ ವರ್ಧಂತಿ: ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆಯಿಂದ ಗೌರವಾಭಿವಂದನೆ

ಮೂಡುಬಿದಿರೆ: ಪಟ್ಟದ ಘನತೆಯನ್ನು ವ್ಯಕ್ತಿತ್ವದ ಔನ್ನತ್ಯದಿಂದ ಬೆಳಗಿಸಿ, ಧರ್ಮವನ್ನು ಸೇವೆಯಾಗಿ, ಸೇವೆಯನ್ನು ಸಂಸ್ಕೃತಿಯಾಗಿ ಸಾಕಾರಗೊಳಿಸಿದ  ವ್ಯಕ್ತಿತ್ವ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 59ನೇ ಪಟ್ಟಾಭಿಷೇಕ ವರ್ಧಂತಿಯ ಸಂದರ್ಭದಲ್ಲಿ, ಮೂಡುಬಿದಿರೆ  ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್ ಸಂಸ್ಥೆಯ ಪರವಾಗಿ ಗೌರವಿಸಿ, ಅಭಿವಂದನೆ ಸಲ್ಲಿಸಿದರು.
ಅನ್ನದಾನ, ವಿದ್ಯಾದಾನ, ಸಮಾಜಸೇವೆ ಹಾಗೂ ಸಂಸ್ಕೃತಿಯ ಸಂವರ್ಧನೆಯ ಮೂಲಕ ಧರ್ಮದರ್ಶನಕ್ಕೆ ಜೀವಂತ ಭಾಷ್ಯ ಬರೆದಿರುವ ಹೆಗ್ಗಡೆಯವರ ಸೇವಾಯಾತ್ರೆ ಸಮಾಜದ ಕೃತಜ್ಞತೆಗೆ ಪಾತ್ರವಾದ ಮಹೋನ್ನತ ಸಾಧನೆಯಾಗಿದೆ. ಜ್ಞಾನಕ್ಕೆ ಸಂಸ್ಕಾರವೂ, ಸಾಧನೆಗೆ ಸಮಾಜಮುಖಿ ಪ್ರಜ್ಞೆಯೂ ಸಂಗಾತಿಯಾಗಬೇಕೆಂಬ ಮೌಲ್ಯದೊಂದಿಗೆ ಮುನ್ನಡೆಯುತ್ತಿರುವ ಎಕ್ಸಲೆಂಟ್ ಸಂಸ್ಥೆಗಳ ಈ ಗೌರವಾಭಿವಂದನೆಯು ಸೇವಾತಪಸ್ವಿಯ ಸಾಧನೆಗೆ ಸಲ್ಲಿಸಿದ ಗೌರವ ಮಾತ್ರವಲ್ಲದೆ, ಮೌಲ್ಯಾಧಾರಿತ ಬದುಕಿಗೆ ಸಲ್ಲಿಸಿದ ಗೌರವವೂ ಆಗಿದೆ ಎಂದು ಯುವರಾಜ್ ಜೈನ್ ತಿಳಿಸಿದ್ದಾರೆ.