MOODUBIDIRE
Bidire News

ಸಿಎ ಇಂಟರ್‌ ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್‌ನ 21 ವಿದ್ಯಾರ್ಥಿಗಳು ಉತ್ತೀರ್ಣ: ರಕ್ಷಾ ರಾಮಚಂದ್ರ ನಾಯ್ಕ್‌ಗೆ ರಾಷ್ಟ್ರೀಯ ಮಟ್ಟದ 49ನೇ ರ‍್ಯಾಂಕ್


ಮೂಡುಬಿದಿರೆ: ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ರಕ್ಷಾ ರಾಮಚಂದ್ರ ನಾಯ್ಕ್ ಎರಡೂ ಗ್ರೂಪ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ 435 ಅಂಕ ಗಳಿಸಿ ರಾಷ್ಟ್ರೀಯ ಮಟ್ಟದಲ್ಲಿ 49ನೇ ರ‍್ಯಾಂಕ್ ಪಡೆದಿದ್ದಾರೆ.
ಗ್ರೂಪ್-1ರಲ್ಲಿ  ಆಳ್ವಾಸ್‌ನ 18 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.54.54ರ ಫಲಿತಾಂಶ ದಾಖಲಿಸಿದ್ದಾರೆ. ಗ್ರೂಪ್-2ರಲ್ಲಿ ಕಾಲೇಜಿನ ಒಂಬತ್ತು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.31.03ರ ಫಲಿತಾಂಶ ಸಾಧಿಸಿದ್ದಾರೆ. ಎರಡೂ ಗ್ರೂಪ್‌ಗಳಲ್ಲಿ ಆಳ್ವಾಸ್‌ನ ಆರು ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.23.08ರ ಫಲಿತಾಂಶ ದಾಖಲಿಸಿದ್ದಾರೆ.
ಎರಡೂ ಗ್ರೂಪ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾದವರು ರಕ್ಷಾ ರಾಮಚಂದ್ರ ನಾಯ್ಕ್ (435), ಅವನಿ ಉಮೇಶ್ ರಾವ್ (415), ಫಾತಿಮಾ ಅಸ್ನಾ (388), ಅಂಕಿತಾ ರಾವ್ (372), ಜೈಶ್ನವ್ ಜಿ. (318) ಹಾಗೂ ಪ್ರಜ್ವಲ್ ಕೆ. (307).
ಗ್ರೂಪ್-2ರಲ್ಲಿ ಪ್ರಸಿದ್ಧ್ ಎಂ. ಪೂಜಾರಿ (172), ಸಾಕ್ಷಿ ಆರ್. ಪೈ (170), ಸುಮುಖ್ ವೇಲಂಕರ್ (162) ಉತ್ತೀರ್ಣರಾಗಿದ್ದಾರೆ. ಗ್ರೂಪ್-1ರಲ್ಲಿ ಪ್ರತೀಶ್ ಆಂಟೋನಿ ಡಿಸೋಜಾ (184), ಸ್ವಾತಿ (183), ಅಪರ್ಣಾ ಸುಧಿ (164), ಭಟ್ ಅಮಿಷಾ (163), ಹರ್ಷಿತಾ ಪೂಜಾರಿ (163), ತೇಜಸ್ವಿನಿ ಕೆ.ಎಸ್. (163), ಜೆ. ಬಸವರಾಜ್ (160), ಪ್ರಜ್ಞಾ ಎನ್. (159), ಸಹನಾ ಕುಮಾರಿ (151), ಮಿಜ್ಬಾ ಶೇಖ್ (150), ನಿಶಾ ಯು. ಶೆಟ್ಟಿ (150) ಹಾಗೂ ಚೈತನ್ಯ ಶ್ರೀರಂಗ (150) ಉತ್ತೀರ್ಣರಾಗಿದ್ದಾರೆ.
ದ್ವಿತೀಯ ವರ್ಷದ ಬಿಕಾಂ ಜತೆಗೆ ಸಿಎ ವ್ಯಾಸಂಗ ಮಾಡುತ್ತಿರುವ ರಕ್ಷಾ, ಕಾಲೇಜಿನ ಆರು ಅಣಕು ಪರೀಕ್ಷೆಗಳು ಹಾಗೂ ಸರಣಿ ಪರೀಕ್ಷೆಗಳು ಸಿದ್ಧತೆಗೆ ಸಹಕಾರಿಯಾದವು ಎಂದಿದ್ದಾರೆ. ಕಳೆದ ಮೂರು ತಿಂಗಳು ಪ್ರತಿದಿನ 10ರಿಂದ 12 ಗಂಟೆ ಅಧ್ಯಯನ ನಡೆಸಿದ್ದು, ಮುಂದಿನ ಸಿಎ ಅಂತಿಮ ಪರೀಕ್ಷೆಯಲ್ಲಿಯೂ ಉತ್ತಮ ರ‍್ಯಾಂಕ್ ಪಡೆಯುವ ಹಂಬಲ ವ್ಯಕ್ತಪಡಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ವೃತ್ತಿಪರ ಶಿಕ್ಷಣದಲ್ಲಿ ಉನ್ನತ ಸಾಧನೆಗೆ ಸಂಸ್ಥೆಯ ಮಾರ್ಗದರ್ಶನ, ಪರೀಕ್ಷಾ ಸಿದ್ಧತೆ ಹಾಗೂ ವಿದ್ಯಾರ್ಥಿಕೇಂದ್ರಿತ ಶೈಕ್ಷಣಿಕ ಬೆಂಬಲ ಪೂರಕವಾಗಿದೆ ಎಂದು ತಿಳಿಸಿದ್ದಾರೆ.