MOODUBIDIRE
Bidire News

ಪುತ್ತಿಗೆಯಲ್ಲಿ 18ನೇ ವರ್ಷದ ಶಾರದೋತ್ಸವ ಸಂಪನ್ನ

ಮೂಡುಬಿದಿರೆ: ಸಾರ್ವಜನಿಕ ಶ್ರೀ ಶಾರದಾಪೂಜಾ ಮಹೋತ್ಸವ ಸಮಿತಿ ಪುತ್ತಿಗೆ ವತಿಯಿಂದ ಆಯೋಜಿಸಲಾದ 18ನೇ ವರ್ಷದ ಶಾರದೋತ್ಸವ ಬುಧವಾರ ಪುತ್ತಿಗೆಯ ಮಹತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ನಡೆಯಿತು.
ಶಾರದೋತ್ಸವದ ಅಂಗವಾಗಿ ಬೆಳಿಗ್ಗೆ ಗಣಯಾಗ, ಶಾರದಾಮಾತೆಯ ಮಣ್ಣಿನ ವಿಗ್ರಹ ಪ್ರತಿಷ್ಠೆ, ಭಜನಾ ಸಂಕೀರ್ತನೆ ಹಾಗೂ ಲಲಿತಾ ಸಹಸ್ರನಾಮ ಪಾರಾಯಣ ನೆರವೇರಿತು.
ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ಹಾಗೂ ಭಜನಾ ಸಂಕೀರ್ತನೆ ನಡೆಯಿತು. ಸಂಜೆ 5ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನೆರವೇರಿತು. ಬಳಿಕ ವಿಸರ್ಜನಾ ಪೂಜೆಯ ನಂತರ ಭವ್ಯ ಶೋಭಾಯಾತ್ರೆ ನಡೆಯಿತು.
ಸಮಿತಿಯ ಗೌರವಾಧ್ಯಕ್ಷ ಕುಲದೀಪ್ ಎಂ., ಅಧ್ಯಕ್ಷ ರಂಗನಾಥ್ ಭಟ್ ದೆಂತಾಬೆಟ್ಟು, ಪ್ರಮುಖರಾದ ನೀಲೇಶ್ ಶೆಟ್ಟಿ ಪುತ್ತಿಗೆಗುತ್ತು, ಕೊಲಕಾಡಿ ವಾದಿರಾಜ್ ಮಡ್ಮನ್ನಯ, ಕಾರ್ಯದರ್ಶಿಗಳಾದ ಸಂದೀಪ್ ಶೆಟ್ಟಿ ಪುತ್ತಿಗೆ, ಸುನೀಲ್ ಕುಮಾರ್ ಪುತ್ತಿಗೆ, ಶ್ರೀನಿವಾಸ್ ರಾವ್ ಪುತ್ತಿಗೆ, ಸಂದೇಶ್ ಪುತ್ತಿಗೆ, ಚಂದ್ರಶೇಖರ್ ನಾಯ್ಕ್, ಪ್ರಶಾಂತ್ ಭಂಡಾರಿ ಪುತ್ತಿಗೆ ಹಾಗೂ ಉಮೇಶ್ ದೇವಾಡಿಗ ಉಪಸ್ಥಿತರಿದ್ದರು.