MOODUBIDIRE
Bidire News

ಅಂತರ್ ಕಾಲೇಜು ದೇಹದಾಢ್ಯ: ಆಳ್ವಾಸ್‌ಗೆ 17ನೇ ಬಾರಿ ಸಮಗ್ರ ಪ್ರಶಸ್ತಿ- ಪ್ರಥಮ್‌ಗೆ ಮಿಸ್ಟರ್ ಮಂಗಳೂರು ವಿಶ್ವವಿದ್ಯಾಲಯ ಪ್ರಶಸ್ತಿ

ಮೂಡುಬಿದಿರೆ: ಪೂರ್ಣಪ್ರಜ್ಞ ಕಾಲೇಜು ಉಡುಪಿ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್ ಕಾಲೇಜು ದೇಹದಾಢ್ಯ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ತಂಡವು 17ನೇ ಬಾರಿ ಸಮಗ್ರ ತಂಡ ಪ್ರಶಸ್ತಿ ಪಡೆದುಕೊಂಡಿದೆ.
ಆಳ್ವಾಸ್ ಕಾಲೇಜಿನ ಪ್ರಥಮ್ ಅವರು ಮಿಸ್ಟರ್ ಮಂಗಳೂರು ವಿಶ್ವವಿದ್ಯಾಲಯ ವೈಯಕ್ತಿಕ ಪ್ರಶಸ್ತಿ ಗಳಿಸಿದ್ದಾರೆ.