ಮೂಡುಬಿದಿರೆ: ಬೆಳುವಾಯಿ ಗ್ರಾಮದ ಕಾನ ಪರಿಸರದ ನಿವಾಸಿ ಆನಂದ ಮುಗೇರ ಅವರ ಆರೋಗ್ಯದ ಸಂಕಷ್ಟಕ್ಕೆ ಸ್ಪಂದಿಸಿರುವ ಸಾಯಿ ಮಾರ್ನಾಡ್ ಸೇವಾ ಸಂಘ ಅಮಣಬೆಟ್ಟು, ತಮ್ಮ 83ನೇ ಸೇವಾ ಯೋಜನೆಯ ಮೂಲಕ ನೆರವು ನೀಡಿದೆ.
ನವೆಂಬರ್ ತಿಂಗಳ ಎರಡನೇ ಯೋಜನೆಯ ಭಾಗವಾಗಿ, ಸಂಘವು ಚಿಕಿತ್ಸೆಗಾಗಿ ಅಗತ್ಯವಿದ್ದ ರೂ. 10,000 ಮೊತ್ತದ ಚೆಕ್ಕನ್ನು ಡಿಸೆಂಬರ್ 1ರಂದು ಆನಂದ ಮುಗೇರ ಅವರಿಗೆ ಹಸ್ತಾಂತರಿಸಿತು.
43 ವರ್ಷ ಪ್ರಾಯದ ಆನಂದ ಮುಗೇರ ಅವರು ಬಾಯಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ. ಈಗಾಗಲೇ ಅವರ ಚಿಕಿತ್ಸೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಲಾಗಿದೆ. ಪ್ರಸ್ತುತ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

