ಮಲ್ಲಿನಾಥ ಇಂದ್ರ‌ ದಂಪತಿಗೆ ವಜ್ರಶ್ರೀ ಅರ್ಚಕ ಪುರಸ್ಕಾರ: ಮೂಡುಬಿದಿರೆ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ ಪ್ರದಾನ

BIDIRE NEWS

ಮೂಡುಬಿದಿರೆ: ಪ್ರತಿ ವರ್ಷ ದಕ್ಷತೆ, ನಿಷ್ಠೆ ಮತ್ತು ಸೇವಾಭಾವದಿಂದ ಧಾರ್ಮಿಕ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರನ್ನು ಗುರುತಿಸಿ ನೀಡಲಾಗುವ ವಜ್ರಶ್ರೀ ಅರ್ಚಕ ಪುರಸ್ಕಾರವನ್ನು ಈ ವರ್ಷ ಮೂಡುಬಿದಿರೆ ಜೈನ ಪಾಠಶಾಲಾ ಬಸದಿಯ ಅರ್ಚಕರಾದ ಮಲ್ಲಿನಾಥ ಇಂದ್ರ ಹಾಗೂ ಕನಕಮಂಜರಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು.

ಶ್ರೀಪಾಲ್ ಎಸ್. ಅವರ ಪತ್ನಿ ವಜ್ರಮ್ಮ ಹಾಗೂ ತಾಯಿ ರಾಜಮತಿ ಅವರ ಸ್ಮರಣಾರ್ಥವಾಗಿ ನೀಡಲಾಗುವ ಈ ಪುರಸ್ಕಾರವನ್ನು ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ಸಹಿತವಾಗಿ ಮೂಡುಬಿದಿರೆ ಜೈನ್ ಮಿಲನ್‌ನ ಮಾಸಿಕ ಸಭೆಯಲ್ಲಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹೇಂದ್ರ ಜೈನ್, ಅಜಿತ್ ಕುಮಾರ್ ಕೊಕ್ರಾಡಿ, ಶ್ವೇತಾ ಜೈನ್, ಜಯರಾಜ್ ಕಂಬಳಿ, ಶಶಿಕಾಂತ ಎಳನೀರು, ಶ್ರೇಯಾಂಸ ಹೆಗ್ಡೆ, ಸಂಪತ್ ಸಾಮ್ರಾಜ್ಯ ಶಿರ್ತಾಡಿ  ಶ್ರೀಪಾಲ್ ಎಸ್. ಸೇರಿದಂತೆ ಜೈನ್ ಮಿಲನ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.


slider