ವಾಲ್ಪಾಡಿ ಟ್ರೋಫಿ: ಪುತ್ತಿಗೆ ತಂಡ ಚಾಂಪಿಯನ್- ಸಾಧಕರಿಗೆ ಸಾಮರಸ್ಯದ ಸನ್ಮಾನ

BIDIRE NEWS

ಮೂಡುಬಿದಿರೆ:ಫ್ರೆಂಡ್ಸ್ ವಾಲ್ಪಾಡಿ ಆಶ್ರಯದಲ್ಲಿ ಮೂಡುಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಲಾದ ಬೆದ್ರ ಕ್ರಿಕೆಟ್ ಯೂನಿಯನ್‌ನ ಹತ್ತು ತಂಡಗಳ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಕೂಟದ ಸಮಾರೋಪ ಸಮಾರಂಭವು ಶನಿವಾರ ನಡೆಯಿತು.



ಈ ಸಂದರ್ಭದಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕ್ರೀತಾ, ಕರಾಟೆ ಸಾಧಕ ಮುಹಮ್ಮದ್ ನದೀಮ್ ಹಾಗೂ ಹಾಕಿಯಲ್ಲಿ ಸಾಧನೆ ಮಾಡಿದ ಜಾಸ್ಮಿನ್ ಮರಿಯಾ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಸ್ನೇಕ್ ಮಾಸ್ಟರ್ ಇಸ್ಮಾಯಿಲ್ ಅಡ್ಡೂರು ಹಾಗೂ ಕ್ರಿಕೆಟ್ ಪ್ರೋತ್ಸಾಹಕ ಪೂರ್ಣೇಶ್ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಮುಖಂಡರಾದ ಕೆ.ಪಿ. ಜಗದೀಶ್ ಅಧಿಕಾರಿ, ಸುದರ್ಶನ ಎಂ., ಅಶ್ವಥ್ ಕೆ. ಪಣಪಿಲ, ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ, ಉದ್ಯಮಿ ಕೆ. ಶ್ರೀಪತಿ ಭಟ್, ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಶ್ರೀ ಕಟಿಲೇಶ್ವರಿ ಕನ್ಸ್ಟ್ರಕ್ಷನ್ಸ್‌ನ ಮಾಲಕ ನಾಗೇಶ್ ಬಂಗೇರ ಅಳಿಯೂರು, ವಿನೋಭ್ ಜೈನ್, ಮೊಬೈಲ್ ಶಾಪ್ ಮಾಲಕರ ಸಂಘದ ಅಧ್ಯಕ್ಷ ಸಫ್ವಾನ್, ಪುತ್ತಿಗೆ ತಂಡದ ಮಾಲಕ ಮನೋಜ್, ಗುಂಡುಕಲ್ಲು ತಂಡದ ಮಾಲಕ ರಝಾಕ್, ಬೆದ್ರ ಕ್ರಿಕೆಟ್ ಯೂನಿಯನ್ ಕಾರ್ಯದರ್ಶಿ ವಿಶಾಲ್ ತೋಡಾರ್, ದಿನೇಶ್ ಪೂಜಾರಿ ಮೂಡುಬಿದಿರೆ, ಕೃಷ್ಣೇ ಗೌಡ, ಅಲ್ತಾಫ್ ಮೂಡುಬಿದಿರೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸಿದ್ದರು.

ಈ ವೇಳೆ ಸ್ವರಾಜ್ಯ ಮೈದಾನದಲ್ಲಿ ಕ್ರೀಡಾಕೂಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಶಾಶ್ವತ ವೇದಿಕೆ ನಿರ್ಮಿಸುವ ಅಗತ್ಯವಿದೆ ಎಂಬ ಬೇಡಿಕೆ ವ್ಯಕ್ತವಾಯಿತು.


ಪುತ್ತಿಗೆ ತಂಡ ಚಾಂಪಿಯನ್

ಮೂರು ದಿನಗಳ ಕಾಲ ನಡೆದ ಪಂದ್ಯಾಕೂಟದಲ್ಲಿ ಎಫ್.ಸಿ.ಟಿ. ಪುತ್ತಿಗೆ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿತು. ಎಲೈಟ್ ಗುಂಡುಕಲ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡರೆ, ಶ್ರೀದೇವಿ ಕೊಡ್ಯಡ್ಕ ತಂಡ ತೃತೀಯ ಹಾಗೂ ಸಾರಾ ಫ್ರೆಂಡ್ಸ್ ತಂಡ ನಾಲ್ಕನೇ ಸ್ಥಾನ ಗಳಿಸಿತು.

ವೈಯಕ್ತಿಕ ಪ್ರಶಸ್ತಿಗಳಲ್ಲಿ ಗುಂಡುಕಲ್ ತಂಡದ ಇಮ್ರಾನ್ ಸರಣಿಶ್ರೇಷ್ಠ, ಉನೈಝ್ ಉತ್ತಮ ಕ್ಷೇತ್ರರಕ್ಷಕ, ಪುತ್ತಿಗೆ ತಂಡದ ಸಿರಾಜ್ ಉತ್ತಮ ಎಸೆತಗಾರ, ನಿಝಾಮ್ ಪಂದ್ಯಶ್ರೇಷ್ಠ ಹಾಗೂ ಸಾರಾ ತಂಡದ ಇರ್ಫಾನ್ ಉತ್ತಮ ದಾಂಡಿಗ ಪ್ರಶಸ್ತಿಗೆ ಭಾಜನರಾದರು.

ಫ್ರೆಂಡ್ಸ್ ವಾಲ್ಪಾಡಿ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಆಕಾಶ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿ, ರಶೀದ್ ವಾಲ್ಪಾಡಿ ವಂದಿಸಿದರು.


slider