ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆ, ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ, ಸ್ಥಳೀಯ ಮೂಡುಬಿದಿರೆ ಸಂಸ್ಥೆ ಹಾಗೂ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಹಭಾಗಿತ್ವದಲ್ಲಿ ಕನ್ನಡ ಭವನದಲ್ಲಿ ಐದು ದಿನಗಳ ಕಾಲ ನಡೆಯುವ ರಾಷ್ಟ್ರಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಚಾಲನೆ ದೊರಕಿತು.
ಶಿಬಿರವನ್ನು ಮಂಗಳೂರು ಪೊಲೀಸ್ ಉಪ ಆಯುಕ್ತರಾದ ನಜ್ಮಾ ಫರೂಕಿ ಅವರು ಉದ್ಘಾಟಿಸಿ, ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅವರು ರಾಷ್ಟ್ರಮಟ್ಟದ ಭಾವೈಕ್ಯತಾ ಶಿಬಿರದ ಲೋಗೋವನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರ ಸಂಸ್ಥೆಯ ಪ್ರತಿನಿಧಿ ಹಾಗೂ ಶಿಬಿರದ ನಾಯಕರಾದ ಬಬ್ಲು ಗೋಸ್ವಾಮಿ, ಕರ್ನಾಟಕ ರಾಜ್ಯ ಸಂಸ್ಥೆಯ ರಾಜ್ಯ ಸಂಘಟನಾ ಆಯುಕ್ತ ಎಂ. ಪ್ರಭಾಕರ್ ಭಟ್, ದಕ್ಷಿಣ ಕನ್ನಡ ಜಿಲ್ಲಾ ಸ್ಕೌಟ್ ಆಯುಕ್ತ ಬಿ. ಮಹಮ್ಮದ್ ತುಂಬೆ, ಜಿಲ್ಲಾ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್., ಶಿಬಿರ ಸಹಾಯಕರಾದ ಜನಾರ್ಧನ ಚಕ್ರವರ್ತಿ (ಬೆಂಗಳೂರು ಉತ್ತರ), ರಾಷ್ಟ್ರ ತರಬೇತುದಾರ ನಾರಾಯಣನ್, ಹಾಸನ ಜಿಲ್ಲಾ ಸಹಾಯಕ ಆಯುಕ್ತ ಡಾ. ನಾರಾಯಣ ಜಿ.ಡಿ., ದಕ್ಷಿಣ ಕನ್ನಡ ಜಿಲ್ಲೆಯ ಕು. ದೀಪಿಕಾ, ವಿಶ್ವತ್, ನವೀನ್ (ದಾವಣಗೆರೆ), ರಕ್ಷಿತ್ (ಚಿಕ್ಕಮಗಳೂರು), ಶ್ರೀಕಾಂತ್ ಶರ್ಮ (ರಾಜಸ್ಥಾನ), ಎ.ಎಸ್. ಭಾಟಿ (ಹರಿಯಾಣ) ಹಾಗೂ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಉಪಸ್ಥಿತರಿದ್ದರು.
ರಾಜ್ಯ ಮುಖ್ಯ ಆಯುಕ್ತರಾದ ಶ್ರೀ ಪಿ.ಜಿ.ಆರ್. ಸಿಂಧ್ಯ ಅವರು ಆನ್‌ಲೈನ್ ಮೂಲಕ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶಿಬಿರದಲ್ಲಿ ರಾಷ್ಟ್ರದ ಒಂಬತ್ತು ರಾಜ್ಯಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದು, ಕರ್ನಾಟಕದಿಂದ 237, ಈಸ್ಟರ್ನ್ ರೈಲ್ವೆ 18, ಹರಿಯಾಣ 25, ಕೆವಿಎಸ್ 10, ಎನ್‌ವಿಎಸ್ 10, ಮಧ್ಯಪ್ರದೇಶ 16, ತಮಿಳುನಾಡು 10, ನಾರ್ತ್ ಸೆಂಟ್ರಲ್ ರೈಲ್ವೆ 13 ಹಾಗೂ ರಾಜಸ್ಥಾನದಿಂದ 6 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 345 ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.
ಇದರೊಂದಿಗೆ 15 ಶಿಬಿರ ಸಹಾಯಕರು, 12 ರೋವರ್ಸ್ ಹಾಗೂ ಒಟ್ಟು 372 ಮಂದಿ ಸ್ವಯಂಸೇವಕರು ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

