ನೆಲ್ಲಿಕಾರು ಬಳಿ ಕಾರು-ಗೂಡ್ಸ್ ಟೆಂಪೋ ಡಿಕ್ಕಿ: ಮೂವರಿಗೆ ಗಾಯ

BIDIRE NEWS

.ಮೂಡುಬಿದಿರೆ: ನೆಲ್ಲಿಕಾರು-ಕಾರ್ಕಳ ಮುಖ್ಯ ರಸ್ತೆಯಲ್ಲಿ ಸೋಮವಾರ ಬೆಳಗ್ಗೆ ಕಾರು ಹಾಗೂ ಗೂಡ್ಸ್ ಟೆಂಪೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಾಯಗೊಂಡಿದ್ದಾರೆ.

ಟೆಂಪೋ ಚಾಲಕ ಕೃಷ್ಣರಾಜ್, ಕಾರು ಚಾಲಕ ಲಲಿತೇಶ್ ಗೌಡ ಹಾಗೂ ಬಾಲಕ ಪ್ರವೀಣ್ ಗಾಯಗೊಂಡವರು ಎಂದು ತಿಳಿದುಬಂದಿದೆ.

ಕಾರ್ಕಳ ಕಡೆಯಿಂದ ಹೊಸಮಾರು ಕಡೆಗೆ ಸಾಗುತ್ತಿದ್ದ ಗೂಡ್ಸ್ ಟೆಂಪೋ ಹಾಗೂ ಹೊಸಮಾರು ಕಡೆಯಿಂದ ಕಾರ್ಕಳದತ್ತ ಬರುತ್ತಿದ್ದ ಕಾರಿನ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಕಾರು ಹಾಗೂ ಟೆಂಪೋ ಎರಡೂ ಜಖಂಗೊAಡಿವೆ.

ಅಪಘಾತಕ್ಕೊಳಗಾದ ಗೂಡ್ಸ್ ಟೆಂಪೋದಲ್ಲಿ ಕಾರ್ಕಳ ಕಡೆಯಿಂದ ಮನೆ ಖಾಲಿ ಮಾಡಿ ಸಾಮಗ್ರಿಗಳನ್ನು ಸ್ಥಳಾಂತರಿಸಲು ತೆರಳುತ್ತಿದ್ದ ಕುಟುಂಬ ಪ್ರಯಾಣಿಸುತ್ತಿತ್ತು. ಗಾಯಾಳುಗಳನ್ನು ತಕ್ಷಣ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡುಬಿದಿರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,  ಪ್ರಕರಣ ದಾಖಲಿಸಿಕೊಂಡಿದ್ದಾರೆ.

slider