ಪಾಲಡ್ಕ ಮಕ್ಕಳ ಗ್ರಾಮಸಭೆ: ವಿವಿಧ ಸೌಕರ್ಯಗಳಿಗೆ ವಿದ್ಯಾರ್ಥಿಗಳ ಆಗ್ರಹ

BIDIRE NEWS

ಮೂಡುಬಿದಿರೆ: ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಗ್ರಾಮದ ವಿವಿಧ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ, ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿದ್ಯಾರ್ಥಿಗಳು ಮಕ್ಕಳ ಗ್ರಾಮಸಭೆಯಲ್ಲಿ ಧ್ವನಿ ಎತ್ತಿದರು.


ಕಡಂದಲೆ ಪಲ್ಕೆ ಗಣೇಶ್ ದರ್ಶನ್ ಸಭಾಂಗಣದಲ್ಲಿ ವಿದ್ಯಾರ್ಥಿ ಭವಿಷ್ ಅವರ ಅಧ್ಯಕ್ಷತೆಯಲ್ಲಿ ನಡೆದ 2025-26ನೇ ಸಾಲಿನ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲೆಗಳ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದರು.


ಪ್ರಮುಖ ಬೇಡಿಕೆಗಳು:

ವಿದ್ಯಾಗಿರಿ ಶಾಲೆ: ಶೌಚಾಲಯ ನಿರ್ಮಾಣ, ಹೆಚ್ಚುವರಿ ತರಗತಿ ಕೊಠಡಿಗಳು, ಕಂಪ್ಯೂಟರ್ ಹಾಗೂ ಪ್ರಿಂಟರ್ ಸೌಲಭ್ಯಕ್ಕೆ ಬೇಡಿಕೆ.

 ಕಡಂದಲೆ ಮೈನ್ ಶಾಲೆ: ಸುಸಜ್ಜಿತ ಕಂಪ್ಯೂಟರ್ ಸೌಲಭ್ಯಕ್ಕೆ ಆಗ್ರಹ.

 ಕೇಮಾರು ಶಾಲೆ: ಶಾಲಾ ವಠಾರಕ್ಕೆ ನಾಮಫಲಕ ಅಳವಡಿಕೆ ಹಾಗೂ ಆಟದ ಮೈದಾನ ನಿರ್ಮಾಣಕ್ಕೆ ಮನವಿ.

 ಸುಬ್ರಹ್ಮಣ್ಯ ಪ್ರೌಢಶಾಲೆ: ಗ್ರಂಥಾಲಯಕ್ಕೆ ಹೆಚ್ಚಿನ ಪುಸ್ತಕಗಳು ಹಾಗೂ ಇನ್ಸುಲೇಟರ್  ವ್ಯವಸ್ಥೆ ಒದಗಿಸಲು ಕೋರಿಕೆ.

ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಅಮಿತಾ ನಾಯ್ಕ, ಉಪಾಧ್ಯಕ್ಷ ಪ್ರವೀಣ್ ಸೀಕ್ವೆರ, ಶಿಕ್ಷಣ ಇಲಾಖೆಯ ರಾಜೇಶ್ವರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವೀಣಾ ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಶ್ವೇತಾ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಹುನಗುಂದ ಕಾರ್ಯಕ್ರಮ ನಿರೂಪಿಸಿ, ಕಶ್ವಿ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು.

ವರದಿ: ಜಗದೀಶ್ ಪೂಜಾರಿ, ಕಡಂದಲೆ

slider