ಮೂಡುಬಿದಿರೆ: ಕೊಡ್ಯಡ್ಕ ಹೊಸನಾಡಿನ ಶ್ರೀ ದೇವಿ ಅನ್ನಪೂರ್ಣೇಶ್ವರಿ ಅಮ್ಮನವರ ವಾರ್ಷಿಕ ಜಾತ್ರೋತ್ಸವವು ಜ. 24ರಿಂದ ಜ. 27ರವರೆಗೆ ನಡೆಯಲಿದೆ.
ಜ. 24 ಶನಿವಾರ ಸಂಜೆ 6.30ಕ್ಕೆ ತೋರಣ ಮುಹೂರ್ತ, ವಾಸ್ತು ಪೂಜೆ, ವಾಸ್ತು ಹೋಮ, ರಾಕ್ಷಘ್ನ ಹೋಮ, ದೀಕ್ಷಾಲಕ ಬಲಿ ಹಾಗೂ ಮಹಾಪೂಜೆ ನಡೆಯಲಿದೆ.ಜ. 25 ಆದಿತ್ಯವಾರ ಬೆಳಿಗ್ಗೆ 8 ಗಂಟೆಗೆ ಗಣಹೋಮ, ನವಕ ಪ್ರಧಾನ ಹಾಗೂ ಪರಿವಾರ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಉತ್ಸವ ಬಲಿ ಮತ್ತು ಮಹಾಪೂಜೆ ನೆರವೇರಲಿದೆ. ಸಂಜೆ 7 ಗಂಟೆಗೆ ಶ್ರೀ ದೇವಿ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ರಂಗಪೂಜೆ, ರಾತ್ರಿ 8 ಗಂಟೆಗೆ ಉತ್ಸವ ಬಲಿ ಹಾಗೂ ರಾತ್ರಿ 9 ಗಂಟೆಗೆ ಕೆರೆದೀಪೋತ್ಸವ ಮತ್ತು ಸುಡುಮದ್ದು ಪ್ರದರ್ಶನ ನಡೆಯಲಿದೆ. ಜ. 26 ಸೋಮವಾರ ಬೆಳಿಗ್ಗೆ 8 ಗಂಟೆಗೆ ನವಕ ಪ್ರಧಾನ ಕಲಶಾಭಿಷೇಕ, ಬೆಳಿಗ್ಗೆ 10 ಗಂಟೆಗೆ ಭಜನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಉತ್ಸವ ಬಲಿ, ರಥಾರೋಹಣ ಹಾಗೂ ರಥೋತ್ಸವ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7 ಗಂಟೆಗೆ ಉತ್ಸವ ಬಲಿ, ರಾತ್ರಿ 8 ಗಂಟೆಗೆ ಶ್ರೀ ದೇವಿಗೆ ರಥದಲ್ಲಿ ಹೂ ಸಮರ್ಪಣೆ ಹಾಗೂ ಹೂವಿನ ಪೂಜೆ, ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ರಥೋತ್ಸವ, ಸುಡುಮದ್ದು ಪ್ರದರ್ಶನ, ದೈವ–ದೇವರ ಭೇಟಿ ಹಾಗೂ ವಸಂತ ಪೂಜೆ ನಡೆಯಲಿದೆ.
ಜ. 27 ಮಂಗಳವಾರ ಬೆಳಿಗ್ಗೆ 8 ಗಂಟೆಗೆ ನವಕ ಪ್ರಧಾನ ಕಲಶಾಭಿಷೇಕ, ಮಧ್ಯಾಹ್ನ 12 ಗಂಟೆಗೆ ಉತ್ಸವ ಬಲಿ, ಮಧ್ಯಾಹ್ನ 1 ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಲಿದೆ. ಸಂಜೆ 7 ಗಂಟೆಗೆ ಉತ್ಸವ ಬಲಿ, ಪೇಟೆ ಸವಾರಿ ಹಾಗೂ ವಸಂತ ಪೂಜೆಯೊಂದಿಗೆ ಜಾತ್ರೋತ್ಸವ ಸಮಾರೋಪಗೊಳ್ಳಲಿದೆ.
ಜಾತ್ರೋತ್ಸವದ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಾಲಯ ಆಡಳಿತ ಮಂಡಳಿ ಮನವಿ ಮಾಡಿದೆ.

