ರಾಣಿ ಅಬ್ಬಕ್ಕ ಕುರಿತು ಜಾಗೃತಿ: ಜವನೆರ್ ಬೆದ್ರ ಸ್ಥಾಪಕ ಅಮರ್ ಕೋಟೆಯವರಿಗೆ ಗೌರವಾರ್ಪಣೆ

BIDIRE NEWS

ಮೂಡುಬಿದಿರೆ:ತುಳುನಾಡಿನ ವೀರವನಿತೆ ರಾಣಿ ಅಬ್ಬಕ್ಕಳ ಕುರಿತು ವಿಶೇಷ ಕಾರ್ಯಕ್ರಮಗಳ ಮೂಲಕ ಗಮನಾರ್ಹ ಅಭಿಯಾನ ನಡೆಸಿರುವ 'ಜವನೆರ್ ಬೆದ್ರ' ಸಂಘಟನೆಯ ಸಂಸ್ಥಾಪಕ ಅಮರ್ ಕೋಟೆ ಅವರಿಗೆ ವಿಶೇಷ ಗೌರವ ಸಲ್ಲಿಸಲು ನಿರ್ಧರಿಸಲಾಗಿದೆ.

ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜಿನಲ್ಲಿ ನಡೆಯಲಿರುವ ಎ.ಬಿ.ಆರ್.ಎಸ್.ಎಂ (ABRSM) ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (KRMSS) ಮಂಗಳೂರು ವಿಭಾಗ ಮತ್ತು ಎಕ್ಸಲೆಂಟ್ ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿರುವ 'ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ' ಕಾರ್ಯಕ್ರಮದಲ್ಲಿ ಈ ಸನ್ಮಾನ ನಡೆಯಲಿದೆ.

ರಾಣಿ ಅಬ್ಬಕ್ಕನ ಸಾಹಸಗಾಥೆಯನ್ನು ಯುವಜನತೆಗೆ ತಲುಪಿಸುವಲ್ಲಿ ಅಮರ್ ಕೋಟೆ ಅವರು ಪಟ್ಟ ಶ್ರಮ ಮತ್ತು ಅವರ ಸಾಂಘಿಕ ಹೋರಾಟವನ್ನು ಗುರುತಿಸಿ ಈ ಗೌರವ ನೀಡಲಾಗುತ್ತಿದೆ. ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯದ ಪ್ರಮುಖರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ.

slider