ಮೂಡುಬಿದಿರೆ: ಯಾವ ಧರ್ಮ ಎನ್ನುವುದು ನಮ್ಮಲ್ಲಿ ದೊಂಬಿ ಎಬ್ಬಿಸುವುದಲ್ಲ. ಧರ್ಮ ಎನ್ನುವುದು ಬದುಕನ್ನು ಬೆಳಗುವುದಕ್ಕೆ ಇರುವಂಥದ್ದು.ಆದರೆ ಇಂದು ಧರ್ಮದ ಮರ್ಮವನ್ನರಿಯದೆ ಬೆಳಗಬೇಕಾದ ಧರ್ಮವನ್ನು ಬದಿಗೊತ್ತಿ ಕೆಟ್ಟ ನಡವಳಿಕೆಗಳಿಂದ ಧರ್ಮಾಂಧ,ಮಾತಾಂಧರಾಗುತ್ತಿದ್ದೇವೆ ಎಂದು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ,ಯಕ್ಷಗಾನ ಅರ್ಥದಾರಿಗಳೂ ಆದ ಡಾ.ವಿನಾಯಕ ಭಟ್ ಗಾಳಿಮನೆ ಅವರು ವಿಷಾದಿಸಿದರು.
ಮೂಡುಬಿದಿರೆ ಬನ್ನಡ್ಕ 46 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಜಿ ಭಾಷಣಕಾರರಾಗಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಧುರೀಣ, ಸಾರ್ವಜನಿಕ ಶ್ರೀ ಶಾರದೋತ್ಸವ ಟ್ರಸ್ಟ್ ಬನ್ನಡ್ಕ ಅಧ್ಯಕ್ಷ ಎಂ ದಯಾನಂದ ಪೈ ಹಾಗೂ ಅರುಣ್ ಪ್ರಕಾಶ್ ಶೆಟ್ಟಿ, ಪಂಚಾಯತ್ ಸದಸ್ಯರಾದ ನಿತಿನ್ ಕೋಟ್ಯಾನ್ ರಾಮಚಂದ್ರ ದೇವಾಡಿಗ ಅವರನ್ನು ಸನ್ಮಾನಿಸಲಾಯಿತು.
ಬನ್ನಡ್ಕ ದೈವಸ್ಥಾನದ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್, ಉದ್ಯಮಿ ಅರುಣ್ ಪ್ರಕಾಶ್ ಶೆಟ್ಟಿ, ಧರಣೇಂದ್ರ, ಸಮಿತಿಯ ಅಧ್ಯಕ್ಷ ಸೂರಜ್ ಎಂ.ಬನ್ನಡ್ಕ, ಪೊಲೀಸ್ ಅಧಿಕಾರಿ ರಾಜೇಶ್ ರಾವ್, ಕೇಶವ ಪೂಜಾರಿ ಕಾರ್ಯದರ್ಶಿ ಉಮೇಶ್ ಡಿ ಸಾಲ್ಯಾನ್ ಉಪಸ್ಥಿತರಿದ್ದರು.
ಸಂತೋಷ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಬನ್ನಡ್ಕ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಭಜನೆ, ಕಾರ್ಕಳದ ಡೆನ್ನಾನ ಕಲಾವಿದರಿಂದ ಡೆನ್ನಾನ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.

