ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಪುಸ್ತಕ ಹಸ್ತಾಂತರಿಸಿದ ಯುವ ಲೇಖಕಿ ರಿಶಲ್ ಫೆರ್ನಾಂಡಿಸ್

BIDIRE NEWS

ಮೂಡುಬಿದಿರೆ: ಯುವ ಲೇಖಕಿ, ವಾಗ್ಮಿ ಹಾಗೂ ಎಬಿವಿಪಿ ಕಾರ್ಯಕರ್ತೆ ರಿಶಲ್ ಫೆರ್ನಾಂಡೀಸ್ ಅವರು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರನ್ನು ದೆಹಲಿಯ ಅವರ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ರಿಶಲ್ ಅವರು ತಾವು ಬರೆದ ಪುಸ್ತಕವನ್ನು ಸಚಿವರಿಗೆ ಪ್ರಸ್ತುತಪಡಿಸಿ, ಅದರ ಕುರಿತು ಚರ್ಚಿಸಿದರು. ಯುವ ಲೇಖಕಿಯ ಸಾಹಿತ್ಯಿಕ ಆಸಕ್ತಿ ಮತ್ತು ಸಾಮಾಜಿಕ ಕಳಕಳಿಯನ್ನು ಮೆಚ್ಚಿದ ಸಚಿವರು, ಅವರ ಸಾಧನೆಯನ್ನು ಶ್ಲಾಘಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಒಬ್ಬ ಸಕ್ರಿಯ ವಿದ್ಯಾರ್ಥಿ ಸಂಘಟನೆಯ ಸದಸ್ಯೆಯಾಗಿ ರಿಶಲ್ ಅವರ ಬರಹದ ಹವ್ಯಾಸವು ಇತರ ಯುವಜನರಿಗೆ ಮಾದರಿಯಾಗಿದೆ ಎಂದು ಈ ಸಂದರ್ಭದಲ್ಲಿ ಅಭಿಪ್ರಾಯಪಡಲಾಯಿತು.


slider