ಬೀ ಗುಡ್ ಡು ಗುಡ್ ರಾಷ್ಟ್ರವ್ಯಾಪಿ ಅಭಿಯಾನದಲ್ಲಿ ಮೂಡುಬಿದಿರೆಯ ಲೇಖಕಿ ರೆಶೆಲ್ ಫೆರ್ನಾಂಡಿಸ್ ಉಪನ್ಯಾಸ

BIDIRE NEWS
ಮೂಡುಬಿದಿರೆ: ಎಬಿವಿಪಿ ಸದಸ್ಯೆ, ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಲೇಖಕಿ ರಿಶಲ್ ಫೆರ್ನಾಂಡಿಸ್ ಅವರು ಸಮರ್ಥ ಭಾರತ ಆಯೋಜಿಸಿರುವ ಸ್ವಾಮಿ ವಿವೇಕಾನಂದರ ಕುರಿತಾದ ರಾಷ್ಟ್ರವ್ಯಾಪಿ ಯುವ ಅಭಿಯಾನದ ಕುರಿತು ಬೀಗುಡ್ ಡೂಗುಡ್' ಆನ್‌ಲೈನ್ ಉಪನ್ಯಾಸ ಸರಣಿಯಲ್ಲಿ ಉಪನ್ಯಾಸ ನೀಡಿದರು. 

ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಡೆದುಕೊಳ್ಳುವ ಮೂಲಕ ದೇಶದ ಯುವಕರು ಉತ್ತಮ ವ್ಯಕ್ತಿಗಳಾಗಲು ಬಯಸುವ ವಿವಿಧ ಅಂಶಗಳ ಕುರಿತು ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. 

ಉಪನ್ಯಾಸ ಸರಣಿಯಲ್ಲಿ ರಾಷ್ಟ್ರ ಮತ್ತು ವಿಶ್ವಾದ್ಯಂತದ ಗಣ್ಯ ವ್ಯಕ್ತಿಗಳನ್ನು ಮಾತನಾಡಲು ಆಹ್ವಾನಿಸಲಾಗಿತ್ತು.
slider