ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನ ವಿಚಾರ : ಮೂಡುಬಿದಿರೆಯಲ್ಲಿ ನಡೆದ ರಾಜಿ ಸಂಧಾನದಿಂದ ಇತ್ಯರ್ಥ

BIDIRE NEWS

ಮೂಡುಬಿದಿರೆ : ಮಂಗಳೂರು ಕಂಬಳದ ವೇಳೆ ಕಂಬಳ ಕ್ಷೇತ್ರದ ಹಿರಿಯ ಸಾಧಕ, ಗುಣಪಾಲ ಕಡಂಬ ಅವರಿಗೆ ಸಾರ್ವಜನಿಕವಾಗಿ ಅವಮಾನ ಮಾಡಲಾದ ಘಟನೆಯಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ಈಗ ಅಧಿಕೃತವಾಗಿ ತೆರೆ ಬಿದ್ದಿದೆ. 

ಮೂಡುಬಿದಿರೆ  ವಕೀಲ‌ ಶಾಂತಿ ಪ್ರಸಾದ್ ಹೆಗ್ಡೆ ಅವರ ಕಚೇರಿಯಲ್ಲಿ‌ಪ್ರಮುಖರ ಸಮ್ಮುಖದಲ್ಲಿ ನಡೆದ ಸಂಧಾನ ಸಭೆಯು ಯಶಸ್ವಿಯಾಗಿದ್ದು, ವಿವಾದ ಇತ್ಯರ್ಥಗೊಂಡಿದೆ. ಕೊಲಚ್ಚೂರು ಕೊಂಡೊಟ್ಟು ಸುಕುಮಾರ್ ಶೆಟ್ಟಿ , ಸಂಸದ ಕ್ಯಾ. ಬ್ರಿಜೇಶ್ ಚೌಟ, ಕಂಬಳ ಸಮಿತಿ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಗುಣಪಾಲ ಕಡಂಬ, ಮುಚ್ಚೂರು ಲೋಕೇಶ್ ಶೆಟ್ಟಿ, ಅರುಣ್ ಶೆಟ್ಟಿ, ಹರ್ಷವರ್ಧನ್ ಪಡಿವಾಳ್,  ರಶ್ಮಿತ್ ಶೆಟ್ಟಿ, ಜಾಯ್ಲಸ್ ತಾಕೋಡೆ, ತಾಕೋಡೆ ಸಹಿತ ಕಂಬಳ ಪ್ರಮುಖರು ಸಂಧಾನ ಸಭೆಯಲ್ಲಿದ್ದರು.

slider