ಪತ್ರಕರ್ತ ಆರ್. ಬಿ. ಜಗದೀಶ್ ಅವರಿಗೆ 'ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ - 2026

BIDIRE NEWS

ಮಂಗಳೂರು: ಪ್ರಸಿದ್ಧ ಪತ್ರಕರ್ತ, ಮಾಧ್ಯಮ ಪ್ರವರ್ತಕ,  ಲೇಖಕ ಆರ್. ಬಿ. ಜಗದೀಶ್ ಅವರು ಕಾಸರಗೋಡಿನ ಕನ್ನಡ ಭವನ ನೀಡುವ ಪ್ರತಿಷ್ಠಿತ ಅಂತರರಾಜ್ಯ ಪ್ರಶಸ್ತಿಯಾದ "ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ - 2026" ಗೆ ಆಯ್ಕೆಯಾಗಿದ್ದಾರೆ.

ಮೂಲತಃ ಕಾಸರಗೋಡಿನವರಾದ ಆರ್. ಬಿ. ಜಗದೀಶ್ ಅವರು ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮೂಡುಬಿದಿರೆ‌‌ ಶಿರ್ತಾಡಿ ನಿವಾಸಿಯಗಿರುವ ಅವರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕೆನರಾ ಟೈಮ್ಸ್ ಗ್ರೂಪ್, ಮಂಗಳೂರು ಮಿತ್ರ, ಜನ ಈ ದಿನ, ಪಟ್ಟಾಂಗ, ಉಡುಪಿ ನ್ಯೂಸ್, ವಿಜಯಕಿರಣ, ವಿಜಯವಾಣಿ, ಜಯಕಿರಣ ಹಾಗೂ ಡಾಯ್ಜಿ ವರ್ಲ್ಡ್ ನಂತಹ ಪ್ರತಿಷ್ಠಿತ ಮಾಧ್ಯಮ ಸಂಸ್ಥೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿರುವ ಇವರು, ಪ್ರಸ್ತುತ 'ಆರ್. ಬಿ. ನ್ಯೂಸ್ ಕನ್ನಡ' ಮಾಧ್ಯಮದ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭ:

ಕನ್ನಡ ಭವನದ ರಜತ ಸಂಭ್ರಮ ಹಾಗೂ 'ನಾಡು ನುಡಿ ಹಬ್ಬ' ಕಾರ್ಯಕ್ರಮದ ಅಂಗವಾಗಿ ಬರುವ ಜನವರಿ 18 ರಂದು ಕಾಸರಗೋಡಿನ ನುಳ್ಳಿಪ್ಪಾಡಿಯ ಕನ್ನಡ ಭವನದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

slider