ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಜನರಿಗೆ ನೀರು ಸರಬರಾಜು ಮಾಡುವ ಪುಚ್ಚೆಮೊಗರು ಅಣೆಕಟ್ಟಿನಲ್ಲಿ ತುರ್ತು ಸ್ವಚ್ಛತಾ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ, ಜನವರಿ 7 ರಿಂದ 11 ರವರೆಗೆ ಪಟ್ಟಣದಾದ್ಯಂತ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪುರಸಭೆಯ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ "ಅಮೃತ್ 2.0" ಯೋಜನೆಯಡಿ ಪುಚ್ಚೆಮೊಗರು ಅಣೆಕಟ್ಟಿನ ಇಂಟೆಕ್ ವೆಲ್ ಮತ್ತು ಜಾಕ್ ವೆಲ್ ಸ್ವಚ್ಛಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರದವರೆಗೆ ಅಣೆಕಟ್ಟಿನಿಂದ ಸರಬರಾಜಾಗುವ ನೀರು ಸ್ಥಗಿತಗೊಳ್ಳಲಿದೆ.
ನೀರು ಸ್ಥಗಿತಗೊಂಡ ಅವಧಿಯಲ್ಲಿ ಸಾರ್ವಜನಿಕರಿಗೆ ನೀರಿನ ತುರ್ತು ಅವಶ್ಯಕತೆಯಿದ್ದಲ್ಲಿ ಅಥವಾ ಟ್ಯಾಂಕರ್ ಮೂಲಕ ನೀರು ಪಡೆಯಲು ಪುರಸಭೆಯ ಹೆಲ್ಪ್‌ಲೈನ್ ಸಂಖ್ಯೆಗಳನ್ನು ಸಂಪರ್ಕಿಸಬಹುದು:ಮೊಬೈಲ್: 9632187159, ಲ್ಯಾಂಡ್‌ಲೈನ್: 08258-236236
ಸಾರ್ವಜನಿಕರು ಈ ವ್ಯತ್ಯಯವನ್ನು ಗಮನಿಸಿ, ನೀರನ್ನು ಮಿತವಾಗಿ ಬಳಸಿ ಪುರಸಭೆಯೊಂದಿಗೆ ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.

