ಮಂಗಳೂರು: ಮೂಡುಬಿದಿರೆ ಉಪಕೇಂದ್ರದಿಂದ ಹೊರಡುವ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರಣದಿಂದಾಗಿ ಜನವರಿ 6ರಂದು ಮೂಡುಬಿದಿರೆ ಪೇಟೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಾಹ್ನ 12:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಮೂಡುಬಿದಿರೆ ಪೇಟೆ, ಮಾಸ್ತಿಕಟ್ಟೆ, ನೆಲ್ಲಿಗುಡ್ಡೆ, ಗಾಂಧಿನಗರ, ಕಾಡದಬೆಟ್ಟು, ಮಹಾವೀರ ಕಾಲೇಜು, ವಿವೇಕಾನಂದ ನಗರ, ಸ್ವರಾಜ್ ಮೈದಾನ, ಒಂಟಿಕಟ್ಟೆ, ಕಡಲಕೆರೆ, ಪಿಲಿಪಂಜರ, ಅರಮನೆಬಾಗಿಲು, ನಾಗರಕಟ್ಟೆ, ಜ್ಯೋತಿನಗರ, ಅಲಂಗಾರು, ಜೈನ್ ಪೇಟೆ, ಕೋಟೆಬಾಗಿಲು, ಸುಭಾಷ್ ನಗರ, ಮರಿಯಾಡಿ, ಲಾಡಿ, ಪ್ರಾಂತ್ಯ, ಬೊಗ್ರುಗುಡ್ಡೆ, ಬಿರಾವು, ತಾಕೊಡೆ, ಪುಚ್ಚೆಮೊಗರು, ಕಲ್ಲಬೆಟ್ಟು, ಗಂಟಾಲ್‌ಕಟ್ಟೆ, ಹೊಸಂಗಡಿ, ನೆತ್ತೋಡಿ, ಕೋಟೆಬಾಗಿಲು ದ್ವಾರ, ಕಲ್ಯಾಣಿ ಕೆರೆ, ಮಾರೂರು ಹೊಸಂಗಡಿ, ಶೇಡಿಗುರಿ, ಇರುವೈಲು, ಹೊಸ್ಮಾರ್ ಪದವು, ಕೊನ್ನೆಪದವು, ಮಾರ್ಪಾಡಿ, ಹೌದಾಲ್, ಮೂಡುಕೊಣಾಜೆ, ಪಡುಕೊಣಾಜೆ, ನಿಡ್ಡೋಡಿ, ಸಂಪಿಗೆ, ಕಲ್ಲಮುಂಡ್ಯೂರು, ಕುದ್ರಿಪದವು, ಬೋಂಟ್ರಡ್ಕ, ಸ್ತುತಿಲಪದವು, ಅಶ್ವಥಪುರ, ಮಂಗೆಬೆಟ್ಟು, ನೀರ್ಕೆರೆ, ಕಾಯರ್ ಮುಗೇರು, ಚಕ್ಕುಪಾದೆ, ಕೊಪ್ಪಳ, ಕಳಕಬೈಲು, ಪುತ್ತಿಗೆಪದವು, ಹಂಡೇಲು, ತೋಡಾರು ಪಡೀಲು, ಪುದ್ದರಕೋಡಿ, ತೋಡಾರ್ ಪಲ್ಕೆ, ಮಿಜಾರ್, ಕೊಪ್ಪದ ಕುಮೇರು, ತೋಡಾರ್ ಗರಡಿ, ಪತ್ತೋಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯತ್ಯಯ ಉಂಟಾಗಲಿದೆ.

