ಮೂಡುಬಿದಿರೆ: ಇಲ್ಲಿನ ಗಾಂಧಿನಗರದ ನಿವಾಸಿ ನವ್ಯ ಎಂಬ ಯುವತಿ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮಳಲಿ ಗ್ರಾಮದ ಮುರಳಿ ಯಾನೆ ಮನೋಜ್ (21) ಎಂದು ಗುರುತಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಘಟನೆಯ ಹಿನ್ನೆಲೆ:
ಮೂಡುಬಿದಿರೆಯ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ನವ್ಯ, ಸೋಮವಾರದಂದು ತನ್ನ ಸ್ನೇಹಿತೆಯೊಂದಿಗೆ ಗುರುಪುರ ನದಿ ತೀರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ನವ್ಯ ದಿಢೀರನೆ ನದಿಗೆ ಹಾರಿದ್ದಾರೆ. ಇದನ್ನು ಕಂಡು ಗಾಬರಿಗೊಂಡ ಸ್ನೇಹಿತೆ ನವ್ಯರನ್ನು ರಕ್ಷಿಸಲು ಕೈಹಿಡಿದು ಎಳೆಯಲು ಪ್ರಯತ್ನಿಸಿದರಾದರೂ, ಆ ಪ್ರಯತ್ನ ವಿಫಲವಾಯಿತು. ಈ ವೇಳೆ ನವ್ಯರ ಪ್ರಾಣಪಕ್ಷಿ ಹಾರಿಹೋಗಿದ್ದು, ರಕ್ಷಣೆಗೆ ಮುಂದಾದ ಸ್ನೇಹಿತೆಯ ಕೈಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

