ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ 6ನೇ ಪುಣ್ಯಸ್ಮರಣೆ: ಅಭಿಮಾನಿಗಳಿಂದ ಗೌರವಾರ್ಪಣೆ

BIDIRE NEWS

ಮೂಡುಬಿದಿರೆ: ಮಾಜಿ ಸಚಿವ  ದಿ.ಕೆ. ಅಮರನಾಥ ಶೆಟ್ಟಿ ಅವರ 6ನೇ ಪುಣ್ಯಸ್ಮರಣೆಯ ಅಂಗವಾಗಿ ಮಂಗಳವಾರ ನಿಶ್ಮಿತಾ ಟವರ್ಸ್ ಬಳಿಯಿರುವ ಅವರ ಪುತ್ಥಳಿಗೆ ಅಭಿಮಾನಿಗಳು ಹಾರಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಈ ಸಂದರ್ಭ ಅಮರನಾಥ ಶೆಟ್ಟಿ ಅವರು ಮೂಡುಬಿದಿರೆ ಕ್ಷೇತ್ರದ ಅಭಿವೃದ್ಧಿಗೆ ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಲಾಯಿತು. ಸರಳತೆ, ಜನಪರ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ಜನಮನ ಗೆದ್ದ ನಾಯಕನಾಗಿ ಅವರು ಸದಾ ಸ್ಮರಣೀಯರಾಗಿದ್ದಾರೆ ಎಂದು ಅಭಿಮಾನಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಭರತ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸಂತೋಷ್ ದೇವಾಡಿಗ, ರಮೇಶ್ ಶೆಟ್ಟಿ, ಆಕಾಶ್ ಶೆಟ್ಟಿ, ಸಂತೋಷ್ ಶೆಟ್ಟಿ ತೋಡಾರು, ಸಂದೀಪ್ ಶೆಟ್ಟಿ ತೋಡಾರು ಉಪಸ್ಥಿತರಿದ್ದರು.


slider