ಮಾರ್ನಾಡು ಚೇತನ ಯುವಕ ಮಂಡಲ ಕಣ್ಣಿನ ಉಚಿತ ತಪಾಸಣಾ ಶಿಬಿರ

BIDIRE NEWS

ಮೂಡುಬಿದಿರೆ: ಮೂಡುಮಾರ್ನಾಡು ಚೇತನ ಯುವಕ ಮಂಡಲ  ತಂಡ್ರಕೆರೆ, ಮೂಡುಮಾರ್ನಾಡು, ಮಾರ್ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ, ಮೂಡುಮಾರ್ನಾಡು ಹಾಗೂ 2.5 ಎನ್‌ವಿಜಿ–ಐ ಮಿತ್ರ, ಸುರತ್ಕಲ್ ಸಂಯುಕ್ತ ಆಶ್ರಯದಲ್ಲಿ  ಚೇತನ ಯುವಕ ಮಂಡಲದ ಕಚೇರಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

2.5 ಎನ್‌ವಿಜಿ–ಐ ಮಿತ್ರ ಸುರತ್ಕಲ್‌ನ ಡಾ. ರಾಮಚಂದ್ರ ಅವರು ಕಣ್ಣಿನ ಆರೋಗ್ಯದ ಮಹತ್ವ, ನಿಯಮಿತ ತಪಾಸಣೆಯ ಅಗತ್ಯತೆ ಹಾಗೂ ಶಿಬಿರದ ಉದ್ದೇಶದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದರು.

ಪಡುಮಾರ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷ ವಾಸುದೇವ್ ಭಟ್, ಚೇತನ ಯುವಕ ಮಂಡಲದ ಗೌರವಾಧ್ಯಕ್ಷ ದೇವರಾಜ್ ಸುವರ್ಣ ಪೋಸಲಾಯಿ, ಚೇತನ ಯುವಕ ಮಂಡಲದ ಅಧ್ಯಕ್ಷ ಸುನಿಲ್ ಪೂಜಾರಿ, ಮಾರ್ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ಸುಮಲತಾ ಪಣರೊಟ್ಟು,  ಶನೈಶ್ಚರ ಸಮಿತಿ ಮಾರ್ನಾಡು ಅಧ್ಯಕ್ಷ ರಮೇಶ್ ಶೆಟ್ಟಿ ಪಣರೊಟ್ಟು, ಶಿಬಿರದಲ್ಲಿ ಚೇತನ ಯುವಕ ಮಂಡಲದ ಸದಸ್ಯರಾದ ನವೀನ್ ಕುಮಾರ್, ಸಮಿತ್ ಕುಮಾರ್, ಗಣೇಶ್ ಪೆರ್ಮುಡೈಲ್,ಮಾರ್ನಾಡು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಸದಸ್ಯರಾದ ಪ್ರಣೀತಾ ಪರೈಲ್, ಸರಿತಾ ಪೋಸಲಾಯಿ  ಉಪಸ್ಥಿತರಿದ್ದರು.

ಯುವಕ ಮಂಡಲದ ಕಾರ್ಯದರ್ಶಿ ಅನಂತಕ ವಸಂತ್ ಮಾರ್ನಾಡು ನಿರೂಪಿಸಿದರು.

slider