ಮೂಡುಬಿದಿರೆ:ಕಲಾಪೋಷಕ ಹಾಗೂ ಶ್ರೀ ಧನಲಕ್ಷ್ಮಿ ಕ್ಯಾಶ್ಯೂ ಸಂಸ್ಥೆಯ ಪ್ರವರ್ತಕರಾದ ಉದ್ಯಮಿ ಕೆ. ಶ್ರೀಪತಿ ಭಟ್ ಅವರು ಸುರಸಾರವ ಕಲಾವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸುರಸಾರವ ಪ್ರೈವೇಟ್ ಲಿಮಿಟೆಡ್ (ಸಂಗೀತ ಶಾಲೆ) ಸಂಸ್ಥೆಯ ವತಿಯಿಂದ ಜ.25ರಂದು ಸ್ಥಳೀಯ ಸಮಾಜಮಂದಿರದಲ್ಲಿ ನಡೆಯಲಿರುವ ದ್ವಿತೀಯ ವರ್ಷದ ‘ಸಂಗೀತೋತ್ಸವ–2026: ದಣಿದ ದನಿಗೆ ರಾಗದ ಬೆಸುಗೆ’ ಕಾರ್ಯಕ್ರಮದಲ್ಲಿ ಶ್ರೀಪತಿ ಭಟ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂಉ ಸಂಸ್ಥೆಯ ಅಧ್ಯಕ್ಷ ಯಶವಂತ್ ಎಂ.ಜಿ ತಿಳಿಸಿದ್ದಾರೆ.

