ಮೂಡುಬಿದಿರೆ:ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ಕಾನ್ಫಿಡೆನ್ಸ್ ಬೂಸ್ಟರ್ ವರ್ಕ್ ಶಾಪ್

BIDIRE NEWS

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಾಸ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಕಾನ್ಫಿಡೆನ್ಸ್ ಬೂಸ್ಟರ್ ವರ್ಕ್ಶಾಪ್ ಅನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆವಹಿಸಿ, ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಹೆಜ್ಜೆ. ವಿದ್ಯಾರ್ಥಿಗಳು ತಮ್ಮೊಳಗಿನ ಸಾಮರ್ಥ್ಯವನ್ನು ಗುರುತಿಸಿ ಧೈರ್ಯದಿಂದ ಮುಂದೆ ಸಾಗಬೇಕು. ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳ ಮಾನಸಿಕ ಬಲವರ್ಧನೆಗೆ ಸಹಕಾರಿಯಾಗುತ್ತವೆ ಎಂದರು. 

ಮಾನಸಿಕ ಆರೋಗ್ಯ ವಿಶ್ಲೇಷಕ ಅಜಿತ್ ಶಂಕರ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಆತ್ಮವಿಶ್ವಾಸ ವೃದ್ಧಿ, ಸ್ವ ಅಂಗೀಕಾರ, ಸಕಾರಾತ್ಮಕ ಚಿಂತನೆ, ಭಯ ನಿವಾರಣೆ, ಪರೀಕ್ಷಾ ಒತ್ತಡ ನಿರ್ವಹಣೆ ಹಾಗೂ ಜೀವನ ಕೌಶಲ್ಯಗಳ ಕುರಿತು ಮಾತನಾಡಿದರು. 

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ಫಲಿತಾಂಶದ ಬಗ್ಗೆ ಅತಿಯಾಗಿ ಯೋಚಿಸದೆ ಪ್ರಾಮಾಣಿಕ ಪ್ರಯತ್ನವನ್ನು ಪರೀಕ್ಷೆಯಲ್ಲಿ ನೀಡಿ. ನೀವು ಕಲಿತ ಅಂಶಗಳನ್ನು ಜೀವನಪೂರ್ತಿ ಅಳವಡಿಸಿಕೊಂಡರೆ ಅದು ನಿಮ್ಮ ಸಾಧನೆಗೆ ದಾರಿಯಾಗುತ್ತದೆ ಎಂದರು. 

ಜನರೇಷನ್ ನೆಕ್ಸ್ಟ್ ನಿರ್ದೇಶಕರಾದ ಗುರುರಾಜ್ ಡಿ. ಹೆಗ್ಡೆ, ಲಕ್ಷಿö್ಮ ಗುರುರಾಜ ಹೆಗ್ಗಡೆ ಉಪಸ್ಥಿತರಿದ್ದರು. 

ಸುಜಾತ ಸ್ವಾಗತಿಸಿದರು. ಪೃಥ್ವಿ ಶೆಟ್ಟಿ ನಿರೂಪಿಸಿದರು. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ವಂದಿಸಿದರು.

slider