ಮಿಜಾರಿನಲ್ಲಿ ಆಂಜನೇಯ ಟ್ರೋಫಿ ಹಗ್ಗಜಗ್ಗಾಟ; ಬೆದ್ರ, ಅಶ್ವತ್ಥಪುರ ತಂಡಗಳಿಂದ ಸಾಧನೆ

BIDIRE NEWS
ಮೂಡುಬಿದಿರೆ: ಮಿಜಾರಿನಲ್ಲಿ ಆಂಜನೇಯ ಫ್ರೆಂಡ್ಸ್ ಬೆದ್ರ ಮಹಿಳಾ ಘಟಕದ ಪ್ರಾಯೋಜಕತ್ವದಲ್ಲಿ ಆಂಜನೇಯ ಟ್ರೋಫಿ–2026 ಪ್ರಥಮ ವರ್ಷದ ಜಿಲ್ಲಾ ಮಟ್ಟದ ಪುರುಷ ಹಾಗೂ ಮಹಿಳೆಯರ ಲೆವೆಲ್ ಮಾದರಿಯ ಹಗ್ಗಜಗ್ಗಾಟ ಪಂದ್ಯಾಟ ಭಾನುವಾರ ನಡೆಯಿತು.
ಪಂದ್ಯಾಟದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಬಲಿಷ್ಠ ತಂಡಗಳು ಭಾಗವಹಿಸಿ ಕ್ರೀಡಾಭಿಮಾನಿಗಳ ಗಮನ ಸೆಳೆದವು. 

ಮಹಿಳಾ ವಿಭಾಗ (500 ಕೆಜಿ): ಈ ವಿಭಾಗದಲ್ಲಿ ಉಡುಪಿ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ಶ್ರೀ ಲಕ್ಷ್ಮೀ ಫ್ರೆಂಡ್ಸ್, ಕಾರ್ಕಳ ತಂಡ ರನ್ನರ್ಸ್ ಸ್ಥಾನ ಗಳಿಸಿತು. ಆಂಜನೇಯ ಫ್ರೆಂಡ್ಸ್, ಬೆದ್ರ ತಂಡ ಪ್ರಥಮ ರನ್ನರ್ಸ್ ಆಗಿ ಹೊರಹೊಮ್ಮಿದರೆ, ರಾಮಾಂಜನೇಯ, ಮೂಡುಬಿದಿರೆ ತಂಡ ದ್ವಿತೀಯ ರನ್ನರ್ಸ್ ಸ್ಥಾನ ಪಡೆದಿತು.

ಪುರುಷರ ವಿಭಾಗ (550 ಕೆಜಿ): ಪುರುಷರ ವಿಭಾಗದಲ್ಲಿ ಎಸ್.ಎಂ. ಪುತ್ತೂರು ತಂಡ ಶಕ್ತಿಶಾಲಿ ಪ್ರದರ್ಶನ ನೀಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಜಾರಂದಾಯ ಫ್ರೆಂಡ್ಸ್ ಸರ್ಕಲ್, ಅಶ್ವತ್ಥಪುರ ತಂಡ ರನ್ನರ್ಸ್ ಸ್ಥಾನ ಪಡೆದಿತು. ದೇವರಬೆಳ್ಳೆ ಶ್ರೀ ಬ್ರಹ್ಮಲಿಂಗೇಶ್ವರ ಮರೋಡಿ ತಂಡ ಪ್ರಥಮ ರನ್ನರ್ಸ್ ಆಗಿ ಗುರುತಿಸಿಕೊಂಡರೆ, ಶ್ರೀ ರಾಮಾಂಜನೇಯ, ಮೂಡುಬಿದಿರೆ ತಂಡ ದ್ವಿತೀಯ ರನ್ನರ್ಸ್ ಸ್ಥಾನ ಗಳಿಸಿತು.
slider