ಮೂಡುಬಿದಿರೆ:ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆಯ ಪ್ರಾಯೋಜಕತ್ವದಲ್ಲಿ ಮೂಡುಬಿದಿರೆಯ ಪೊಲೀಸ್ ಠಾಣೆಯಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಸಂಗ್ರಹಿಸಲು ಅಗತ್ಯವಿರುವ ಕಸದ ಬುಟ್ಟಿಗಳನ್ನು ಪೊಲೀಸ್ ಠಾಣೆಗೆ ಕೊಡುಗೆಯಾಗಿ ನೀಡಲಾಯಿತು. ಇದೇ ವೇಳೆ ನಾಲ್ಕು ಬಗೆಯ ಕಸ ವಿಂಗಡಣೆಯ ಮಹತ್ವ ಕುರಿತು ಪುರಸಭೆ ವತಿಯಿಂದ ಠಾಣೆಯ ಸಿಬ್ಬಂದಿಗಳಿಗೆ ಜಾಗೃತಿ ಮೂಡಿಸಲಾಯಿತು.
ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜೈನ್, ಮಾಜಿ ಅಧ್ಯಕ್ಷೆ ಅನಿತಾ ಪೃಥ್ವಿರಾಜ್, ಹಿರಿಯ ಆರೋಗ್ಯ ನಿರೀಕ್ಷಕಿ ಶಶಿರೇಖಾ, ಕಮ್ಯುನಿಟಿ ಮೊಬಿಲೈಸರ್‌ಗಳಾದ ಆಶಾ, ಅಮಿತಾ, ಪೊಲೀಸ್ ಇಲಾಖೆಯ ಎ.ಎಸ್.ಐ ರಾಜೇಶ್, ಸಿಬ್ಬಂದಿಗಳಾದ ದೇವರಾಜ್, ಅಣ್ಣವ್ವ, ಪ್ರದೀಪ್, ಲಾವಣಿ ಉಪಸ್ಥಿತರಿದ್ದರು.
ಸ್ವಚ್ಛತೆ ಹಾಗೂ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು.

