ಜ್ಯೋತಿಷ್ಯ ಭಾಷಣ ಸ್ಪರ್ಧೆ: ಸತತ ಮೂರನೇ ಬಾರಿ ಚಿನ್ನ ಗೆದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಅಲಂಗಾರಿನ ಸುಮಂತ್ ಭಟ್

BIDIRE NEWS

ಮೂಡುಬಿದಿರೆ: ಬೆಂಗಳೂರು ಸಂಸ್ಕೃತ ವಿಶ್ವವಿದ್ಯಾಲಯದ ಜ್ಯೋತಿಷ್ಯ ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಅಲಂಗಾರು ನಿವಾಸಿ ಸುಮಂತ್ ಭಟ್ ಅವರು ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ಸತತ ಮೂರನೇ ಬಾರಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.ಮತ್ತೊಮ್ಮೆ ರಾಷ್ಟ್ರಮಟ್ಟದ ಜ್ಯೋತಿಷ್ಯ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.



ಅಲಂಗಾರು ಸುಬ್ರಹ್ಮಣ್ಯ ಭಟ್ ಹಾಗೂ ಸುಜಾತ ಭಟ್ ಅವರ ಪುತ್ರರಾಗಿರುವ ಸುಮಂತ್ ಭಟ್ ಅವರು, ಪ್ರಸಿದ್ಧ ವಿದ್ವಾಂಸರಾದ ಅಲಂಗಾರು ಈಶ್ವರ ಭಟ್ ಅವರ ಮೊಮ್ಮಗರಾಗಿದ್ದಾರೆ.

ಸಂಸ್ಕೃತ ಶಾಸ್ತ್ರ ಹಾಗೂ ಜ್ಯೋತಿಷ್ಯ ಕ್ಷೇತ್ರದಲ್ಲಿ ಅಪೂರ್ವ ಪಾಂಡಿತ್ಯ ಪ್ರದರ್ಶಿಸಿರುವ ಅವರು, ಸ್ಪರ್ಧೆಯಲ್ಲಿ ತಮ್ಮ ವಿದ್ವತ್ತಿನೊಂದಿಗೆ ನಿರೂಪಣಾ ಶೈಲಿಯಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವರದಿ: ರಾಯಿ ರಾಜಕುಮಾರ್

slider