ಹಿಂದುತ್ವ ಮತ್ತು ರಾಷ್ಟ್ರೀಯತೆ ಬೇರೆ ಬೇರೆ ಅಲ್ಲ. ಹಿಂದುತ್ವವೆಂದರೆ ಭಾರತೀಯತೆ. ದೇಶದ ಆತ್ಮವೇ ಹಿಂದುತ್ವ. ಆದರೆ ಇದರ ಅರ್ಥವನ್ನು ಬದಲಾಯಿಸುವ ಹುನ್ನಾರು ಅನೇಕ ವರ್ಷಗಳಿಂದ ನಡೆಯುತ್ತಿವೆ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ಸಹ ಕಾರ್ಯದರ್ಶಿ ಗುರುಪ್ರಸಾದ್ ಉಳ್ಳಾಲ್ ಹೇಳಿದರು.
ಅವರು ಭಾನುವಾರ ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಕಡಂದಲೆ, ಪಾಲಡ್ಕ, ಪುತ್ತಿಗೆ ಗ್ರಾಮಗಳನ್ನು ಒಳಗೊಂಡ ಪುತ್ತಿಗೆ ಮಂಡಲ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ದೇಶಪ್ರೇಮದ ಜೊತೆಗೆ ಸಂಸ್ಕಾರ, ಸಾಮರಸ್ಯ ಹಾಗೂ ಪರಿಸರ ಪ್ರೇಮವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. ಪ್ಲಾಸ್ಟಿಕ್ ಮುಕ್ತ ಮಂಡಲ, ಮತಾಂತರ ಮುಕ್ತ ಮಂಡಲ, ಲವ್ ಜಿಹಾದ್ ಮುಕ್ತ ಮಂಡಲ ಎಂಬ ಚಿಂತನೆಯೊAದಿಗೆ ಸಮಾಜ ಪರಿವರ್ತನೆಯತ್ತ ಸಾಗಬೇಕಾಗಿದೆ. ಸಮಾಜದೊಳಗೆ ನಡೆಯುತ್ತಿರುವ ಹುನ್ನಾರಗಳಿಗೆ ಸಮರ್ಥವಾಗಿ ಉತ್ತರ ನೀಡುವ ಸದೃಢ ಹಿಂದೂ ಸಮಾಜ ನಿರ್ಮಾಣದ ಉದ್ದೇಶದಿಂದ ಹಿಂದೂ ಸಂಗಮ ನಡೆಯುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಳದ ಆನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ್ ಎಂ. ವಹಿಸಿದ್ದರು. ದೇವಳದ ಪ್ರಧಾನ ಅರ್ಚಕ ಅಡಿಗಳ್ ಅನಂತಕೃಷ್ಣ ಭಟ್ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾದ ಕಡಂದಲೆ ಸತೀಶ್ ಆಚಾರ್ಯ, ರಂಗನಾಥ ಭಟ್ ದೇಂತಬೆಟ್ಟು ಪುತ್ತಿಗೆ ಹಾಗೂ ಕುಟ್ಟಿ ಬಂಗೇರ ಸಂಪಿಗೆ ಅವರನ್ನು ಸನ್ಮಾನಿಸಲಾಯಿತು.
ಹಿಂದೂ ಸಂಗಮದ ಸಂಯೋಜಕ ಶೇಖರ್ ಕೋಟ್ಯಾನ್ ಪುತ್ತಿಗೆ ಉಪಸ್ಥಿತರಿದ್ದರು.
ಪ್ರಶಾಂತ್ ಭಂಡಾರಿ ಸ್ವಾಗತಿಸಿದರು. ಸಂದೀಪ್ ಶೆಟ್ಟಿ ಪುತ್ತಿಗೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ನೆಲ್ಲಿಗುಡ್ಡೆಯಿಂದ ಪುತ್ತಿಗೆ ಕ್ಷೇತ್ರದವರೆಗೆ ಮೆರವಣಿಗೆ ನಡೆಯಿತು.
ಸ್ಥಳದಲ್ಲಿ ಸನಾತನ ಸಂಸ್ಥೆಯಿಂದ ಗ್ರಂಥಗಳು ಹಾಗೂ ಸಾತ್ವಿಕ ವಸ್ತುಗಳ ಪ್ರದರ್ಶನ–ಮಾರಾಟ ವ್ಯವಸ್ಥೆ ಸಾರ್ವಜನಿಕರಿಗಾಗಿ ಲಭ್ಯವಿತ್ತು.


